ಸಾವಿರಾರು ವರ್ಷಗಳಷ್ಟು ಹಳೆಯ ವೈನ್​​ ಫ್ಯಾಕ್ಟರಿ ಪತ್ತೆ!

masthmagaa.com:

ಇಸ್ರೇಲ್ ಬಳಿಕ ಈಗ ಇರಾಕ್ ನಲ್ಲಿ ಸಾವಿರಾರು ವರ್ಷಗಳ ಹಿಂದಿನ ವೈನ್ ಫ್ಯಾಕ್ಟರಿಯೊಂದು ಪತ್ತೆಯಾಗಿದೆ. ಜೊತೆಗೆ ರಾಜ ದೇವರಿಗೆ ಪ್ರಾರ್ಥನೆ ಮಾಡ್ತಿರೋ ಹಾಗೂ ರೆಕ್ಕೆ ಇರೋ ಗೂಳಿಗಳ ಕೆತ್ತನೆಗಳು ಕೂಡ ಪತ್ತೆಯಾಗಿವೆ. ಇವೆಲ್ಲ 2700 ವರ್ಷಗಳ ಹಿಂದಿನ ಅಸ್ಸೀರಿಯನ್ ರಾಜರುಗಳ ಕಾಲದ್ದು ಅಂತ ಹೇಳಿದ್ದಾರೆ. ದ್ರಾಕ್ಷಿಯಿಂದ ರಸ ತೆಗೆದು ಅದನ್ನ ವೈನ್ ಆಗಿ ಪ್ರಾಸೆಸ್ ಮಾಡೋ 14 ಘಟಕಗಳನ್ನ ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಉತ್ತರ ಇರಾಕ್ ನ ಫೈದಾದಲ್ಲಿ ಸುಮಾರು 9 ಕಿಲೋಮೀಟರ್ ಉದ್ದದ ಪುರಾತನ ನೀರಾವರಿ ಕಾಲುವೆ ಸಿಕ್ಕಿದೆ. ಅದರ ಗೋಡೆಗಳಲ್ಲೇ ಈ ಕೆತ್ತನೆಗಳು ಕಂಡುಬಂದಿವೆ. ಇದರ ಸಮೀಪದಲ್ಲೇ ಗತ ಕಾಲದ ವೈನ್ ಫ್ಯಾಕ್ಟರಿಗಳು ಕೂಡ ಪತ್ತೆಯಾಗಿರೋದು.

-masthmagaa.com

Contact Us for Advertisement

Leave a Reply