ಫಿಲಿಪ್ಪೀನ್ಸ್​ನಲ್ಲಿ ವಿಮಾನ ದುರಂತ: 17 ಯೋಧರು ಸಾವು!

masthmagaa.com:

ಫಿಲಿಪ್ಪೀನ್ಸ್​​​​ನಲ್ಲಿ 92 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನವೊಂದು ಪತನಗೊಂಡಿದೆ. ಇದ್ರಲ್ಲಿ 29 ಮಂದಿ ಮೃತಪಟ್ಟಿದ್ದು, 50 ಮಂದಿಯನ್ನು ರಕ್ಷಿಸಲಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉಳಿದವರು ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಸಿ-130 ವಿಮಾನ ಇದಾಗಿದ್ದು, ಜೋಲೋ ಐಲ್ಯಾಂಡ್​​ನಲ್ಲಿ ಲ್ಯಾಂಡ್ ಆಗುವ ವೇಳೆ ದುರಂತ ಸಂಭವಿಸಿದೆ. ವಿಮಾನದಲ್ಲಿದ್ದ ಎಲ್ಲಾ ಯೋಧರು ಇತ್ತೀಚೆಗಷ್ಟೇ ಸೇನಾ ತರಬೇತಿ ಮುಗಿಸಿದ್ದರು. ಹೀಗಾಗಿ ಅವರನ್ನು ಜೋಲೋ ದ್ವೀಪದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿ ಕರೆದುಕೊಂಡು ಹೋಗಲಾಗ್ತಿತ್ತು ಅಂತ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply