ಭಾರತದಲ್ಲಿ ಕೊರೋನಾಗೆ ಬಲಿಯಾಗಿದ್ದು 49 ಲಕ್ಷ ಮಂದಿ!: ಶಾಕಿಂಗ್ ವರದಿ

masthmagaa.com:

ಕೊರೋನಾ ಸಾವಿನ ವಿಚಾರದಲ್ಲಿ ಭಾರತದ ಸರ್ಕಾರಿ ಲೆಕ್ಕ ತಪ್ಪಿದೆ ಅನ್ನೋ ಆರೋಪವನ್ನು ನಿನ್ನೆಯಷ್ಟೇ ಕೇಂದ್ರ ಸರ್ಕಾರ ಅಲ್ಲಗಳೆದಿತ್ತು. ಆದ್ರೆ ಅದ್ರ ಬೆನ್ನಲ್ಲೇ ಅಮೆರಿಕ ಮೂಲದ ತಜ್ಞರು ಬೆಚ್ಚಿ ಬೀಳೋ ಮಾಹಿತಿ ಪ್ರಪಂಚದ ಮುಂದಿಟ್ಟಿದ್ದಾರೆ. ಭಾರತದಲ್ಲಿ ಕೊರೊನಾದಿಂದಾಗಿ 49 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ತಿಳಿಸಿದ್ಧಾರೆ. ವಾಷಿಂಗ್ಟನ್ ಮೂಲದ ಸೆಂಟರ್ ಫರ್ ಗ್ಲೋಬಲ್ ಡೆವೆಲಪ್​ಮೆಂಟ್ ಮತ್ತು ಮಾಜಿ ಚೀಫ್ ಎಕನಾಮಿಕ್ ಅಡ್ವೈಸರ್​ ಅರವಿಂದ್ ಸುಬ್ರಮಣಿಯಂ ಸೇರ್ಕೊಂಡು ಈ ವರದಿ ಸಿದ್ಧಪಡಿಸಿದ್ದಾರೆ. ಸರ್ಕಾರದ ಪ್ರಕಾರ ಭಾರತದಲ್ಲಿ ಈ ಮಹಾಮಾರಿಗೆ ಈವರೆಗೆ 4.18 ಲಕ್ಷ ಜನ ಪ್ರಾಣ ಕಳ್ಕೊಂಡಿದ್ದು, ಪ್ರಪಂಚದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಬಳಿಕ 3ನೇ ಸ್ಥಾನದಲ್ಲಿದೆ. ಆದ್ರೆ ಈ ತಜ್ಞರು ಮಾತ್ರ 39ರಿಂದ 49 ಲಕ್ಷ ಜನ ಪ್ರಾಣ ಕಳ್ಕೊಂಡಿದ್ದಾರೆ. ದೇಶ ವಿಭಜನೆ ವೇಳೆ ಹಿಂಸಾಚಾರ ನಡೆದು ಆಗಿತ್ತಲ್ವಾ ಸಾವು ನೋವು.. ಅದರ ಬಳಿಕ ಇದೇ ಮೊದಲ ಬಾರಿಗೆ ಈ ಪ್ರಮಾಣದ ಸಾವು ಸಂಭವಿಸಿದೆ ಅಂತ ಕೂಡ ತಿಳಿಸಿದ್ದಾರೆ. ಇನ್ನು ಇವತ್ತು ಒಂದೇ ದಿನ ಭಾರತದ ಸಾವಿನ ಸಂಖ್ಯೆ 3,998ರಷ್ಟು ಏರಿಕೆಯಾಗಿದೆ. ಯಾಕಂದ್ರೆ ಮಹಾರಾಷ್ಟ್ರ ತನ್ನ ಸಾವಿನ ಸಂಖ್ಯೆ ರಿವೈಸ್ ಮಾಡಿ, ಒಂದೇ ದಿನ 3,509 ಸಾವು ದಾಖಲಿಸಿದೆ. ಹೀಗೆ ಇನ್ನು ಬೇರೆ ಬೇರೆ ರಾಜ್ಯಗಳಲ್ಲಿ ಎಷ್ಟು ಕೊರೋನಾ ಸಾವುಗಳು ಲೆಕ್ಕದಿಂದ ಹೊರಗುಳಿದಿದ್ದು, ಇನ್ನು ಹೊರಬರಬೇಕಿದ್ಯೋ ದೇವರಿಗೇ ಗೊತ್ತು.

-masthmagaa.com

Contact Us for Advertisement

Leave a Reply