3 ವರ್ಷದ ಬಾಲಕಿಗೆ ಕೊರೋನಾ! ಮಹಾರಾಷ್ಟ್ರದಲ್ಲಿ 39 ಮಂದಿಗೆ ಸೋಂಕು

masthmagaa.com:

ಮಹಾರಾಷ್ಟ್ರ: ಮುಂಬೈನಲ್ಲಿ 3 ವರ್ಷದ ಮಗುವೊಂದರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಜೊತೆಗೆ ಆಕೆಯ ತಂದೆ-ತಾಯಿಗೂ ಕೊರೋನಾ ಸೋಂಕು ಇರೋದು ಪತ್ತೆಯಾಗಿದೆ. ಮುಂಬೈನ ಕಸ್ತೂರಬಾ ಆಸ್ಪತ್ರೆಯಲ್ಲಿ ಇವರ ಪರೀಕ್ಷೆ ನಡೆಸಲಾಗಿದ್ದು, ಮಗುವಿನ 37 ವರ್ಷದ ತಂದೆ  ಇತ್ತೀಚೆಗಷ್ಟೇ ಅಮೆರಿಕಾದಿಂದ ಮರಳಿದ್ದರು ಎಂದು ತಿಳಿದುಬಂದಿದೆ. ಮೊದಲಿಗೆ ಇವರಲ್ಲಿ ಕೊರೋನಾ ಪತ್ತೆಯಾಗಿದ್ದರಿಂದ ಇವರನ್ನು ಐಸೋಲೇಷನ್ ವಾರ್ಡ್​ನಲ್ಲಿಟ್ಟು ತೀವ್ರ ನಿಗಾ ವಹಿಸಲಾಗಿತ್ತು. ಜೊತೆಗೆ ಇವರ ಮಗಳು ಮತ್ತು ಪತ್ನಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಅವರಲ್ಲೂ ಕೊರೋನಾ ವೈರಸ್ ಪತ್ತೆಯಾಗಿದ್ದು, ಐಸೋಲೇಷನ್ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 6 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply