ದೀಪಾವಳಿ ಸಂದರ್ಭದಲ್ಲಿ 30 ಟನ್ ಚಿನ್ನ ಮಾರಾಟ..!

ದೀಪಾವಳಿ ಹಬ್ಬ ಅಂದ್ರೆ ತುಂಬಾ ಸ್ಪೆಷಲ್​. ಈ ಟೈಮಲ್ಲಿ ಏನಾದ್ರೂ ಖರೀದಿಸೋದು ಕಾಮನ್.. ಆದ್ರೆ ಈ ಸಲ ಭಾರತೀಯರು ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸಿದ್ದಾರೆ.  ಅದೂ ಎಷ್ಟು ಅಂತೀರಾ ಬರೋಬ್ಬರಿ 30 ಟನ್​​​​​. ಈ ಬಗ್ಗೆ ಇಂಡಿಯನ್ ಜ್ಯುವೆಲ್ಲರ್ಸ್​ ಅಸೋಸಿಯೇಷನ್​​​ನ ಸುರೇಂದ್ರ ಮೆಹ್ತಾ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬೆಲೆ ಏರಿಕೆ ಕಾರಣದಿಂದಾಗಿ ಚಿನ್ನದ ಮಾರಾಟ ಕಡಿಮೆಯಾಗಿತ್ತು. ಸುಮಾರು 40 ಟನ್​​ನಷ್ಟು ಆಭರಣ ಸೇಲ್ ಆಗುತ್ತಿತ್ತು. ಹೀಗಾಗಿ ಈ ಸಲ 20 ಟನ್ ಮಾರಾಟವಾಗಬಹುದು ಎಂದು ಊಹಿಸಿದ್ದೆವು. ಆದ್ರೆ ಈ ಬಾರಿ ಬರೋಬ್ಬರಿ 30 ಟನ್ ಚಿನ್ನ ಮಾರಾಟವಾಗಿದೆ ಎಂದಿದ್ದಾರೆ. ಈ ಪ್ರಮಾಣದಲ್ಲಿ ಚಿನ್ನ ಮಾರಾಟವಾಗುತ್ತೆ ಅಂತ ನಾವು ಅಂದುಕೊಂಡಿರಲೇ ಇಲ್ಲ ಎಂದು ಸುರೇಂದ್ರ ಮೆಹ್ತಾ ತಿಳಿಸಿದ್ದಾರೆ.

Contact Us for Advertisement

Leave a Reply