ಮುಂಬೈಗೆ ಬಂತು ಫ್ರಾನ್ಸ್‌ನಲ್ಲಿ ಸಿಲುಕಿದ್ದ 303 ಭಾರತೀಯರಿದ್ದ ವಿಮಾನ!

masthmagaa.com:

ಡಿಸೆಂಬರ್‌ 21ರಂದು ಮಾನವ ಕಳ್ಳಸಾಗಾಣಿಕೆ ಶಂಕೆಯಿಂದ ಫ್ರಾನ್ಸ್‌ನಲ್ಲಿ ಹಾಲ್ಟ್‌ ಮಾಡಲಾಗಿದ್ದ ವಿಮಾನ ಮಂಗಳವಾರ ಮುಂಬೈ ತಲುಪಿದೆ. ಕಳೆದ ಗುರುವಾರ ಇಂಧನ ರಿಫಿಲ್‌ ಮಾಡ್ಕೊಳ್ಳೋಕೆ ಫ್ರಾನ್ಸ್‌ನ ವಾಟ್ರಿ ವಿಮಾನ ನಿಲ್ದಾಣದಲ್ಲಿ ಈ ಏರ್‌ಬಸ್‌ A340 ವಿಮಾನವನ್ನ ಇಳಿಸಲಾಗಿತ್ತು. ಫ್ರಾನ್ಸ್‌ ಪೊಲೀಸರಿಗೆ ವಿಮಾನದ ಮೇಲೆ ಶಂಕೆ ವ್ಯಕ್ತವಾಗಿ ಅದು ಮತ್ತೆ ಹಾರದಂತೆ ತಡೆದಿದ್ರು. ಅಲ್ಲದೆ ವಿಚಾರಣೆ ನಡೆಸಿ ಇಬ್ಬರನ್ನು ಹ್ಯೂಮನ್‌ ಟ್ರಾಫಿಕಿಂಗ್‌ ಕೇಸ್‌ನಲ್ಲಿ ಫ್ರೆಂಚ್‌ ಪೊಲೀಸರು ಅರೆಸ್ಟ್‌ ಮಾಡಿದ್ರು. 303 ಪ್ರಯಾಣಿಕರ ಪೈಕಿ ಹಿಂದಿ ಹಾಗೂ ತಮಿಳು ಮಾತನಾಡೋ ಜನ ಇದ್ರು ಅಂತ ತಿಳಿದು ಬಂದಿದೆ. ಈ ಪೈಕಿ 276 ಮಂದಿ ಮಂಗಳವಾರ ಮುಂಬೈ ತಲುಪಿದ್ದಾರೆ. ಇನ್ನುಳಿದಂತೆ ಇಬ್ಬರು ಮಕ್ಕಳು ಸೇರಿ 27 ಮಂದಿ ಫ್ರಾನ್ಸ್‌ನಲ್ಲೇ ಉಳಿದಿದ್ದಾರೆ. ಇವರು ಫ್ರಾನ್ಸ್‌ನಲ್ಲಿ ಆಶ್ರಯ ಪಡೆಯೋಕೆ ಅರ್ಜಿ ಸಲ್ಲಿಸ್ತೀವಿ ಅಂತ ಅಲ್ಲೇ ಉಳಿದಿರೋದಾಗಿ ಫ್ರಾನ್ಸ್‌ ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply