ಅಫ್ಘಾನಿಸ್ತಾನದಲ್ಲಿ ಮತ್ತೆ ಸ್ಫೋಟ! 33 ಮಂದಿ ಬಲಿ

masthmagaa.com:

ಅಫ್ಘನಿಸ್ತಾನದಲ್ಲಿ ಶಿಯಾ ಅಲ್ಪಸಂಖ್ಯಾತರನ್ನ ಗುರಿಯಾಗಿಸಿ ನಡೆಸುತ್ತಿರುವ ಆತ್ಮಾಹುತಿ ದಾಳಿ ಮುಂದುವರಿದಿದೆ. ಇವತ್ತು ಕಂದಾಹಾರ್​ ನಗರದಲ್ಲಿ ಶಿಯಾ ಮುಸ್ಲಿಮರಿಗೆ ಸೇರಿದ ಮಸೀದಿಯಲ್ಲಿ ಸ್ಫೋಟ ಸಂಭವಿಸಿ, ಕನಿಷ್ಠ 33 ಜನ ಮೃತಪಟ್ಟಿದ್ದಾರೆ. 73ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಗೊಂಡವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಶುಕ್ರವಾರದ ಪ್ರಾರ್ಥನೆಗೆ ಅಂತ ಹೆಚ್ಚು ಜನ ಮಸೀದಿಯಲ್ಲಿ ಸೇರಿದ್ದರು. ಈ ವೇಳೆ ಮೂವರು ಆತ್ಮಾಹುತಿ ದಾಳಿಕೋರರು ತಮ್ಮನ್ನ ತಾವು ಸ್ಫೋಟಿಸಿಕೊಂಡಿದ್ದಾರೆ. ಇಬ್ಬರು ಮಸೀದಿ ಒಳಗೆ ಸ್ಫೋಟಿಸಿಕೊಂಡ್ರೆ, ಓರ್ವ ಪ್ರವೇಶ ದ್ವಾರದಲ್ಲಿ ಸ್ಫೋಟಿಸಿಕೊಂಡಿದ್ದಾನೆ ಅಂತ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕಳೆದ ಶುಕ್ರವಾರ ಕೂಡ ಕುಂದುಝ್​ ನಗರದಲ್ಲಿ ಶಿಯಾ ಮುಸ್ಲಿಮರ ಮಸೀದಿ ಮೇಲೆ ಇದೇ ಥರದ ಆತ್ಮಾಹುತಿ ದಾಳಿ ನಡೆದಿತ್ತು. ಅದರಲ್ಲಿ 80 ಜನ ಪ್ರಾಣ ಕಳ್ಕೊಂಡಿದ್ರು. ಈಗ ಕಂದಹಾರ್​​ನಲ್ಲಿ… ಅಂದ್ಹಾಗೆ ತಾಲಿಬಾನಿಗಳು ಸುನ್ನಿ ಮುಸ್ಲಿಮರು. ಅಫ್ಘನಿಸ್ತಾನದಲ್ಲಿ ಸುನ್ನಿಗಳೇ ಬಹುಸಂಖ್ಯಾತರು. ಶಿಯಾಗಳು ಅಲ್ಪಾಸಂಖ್ಯಾತರು. ಇದೀಗ ಶಿಯಾಗಳನ್ನ ಗುರಿಯಾಗಿಸಿ ಮಾಡಿದ ದಾಳಿಯನ್ನ ಶಿಯಾ ಬಹುಸಂಖ್ಯಾತರಿರೋ ಇರಾನ್​ ಖಂಡಿಸಿದೆ. ಅಫ್ಘನಿಸ್ತಾನದ ಪಕ್ಕದಲ್ಲೇ ಇದೆ ಈ ಇರಾನ್.

-masthmagaa.com

Contact Us for Advertisement

Leave a Reply