ಲಂಡನ್​​ನಲ್ಲಿ ಪತ್ತೆಯಾದ 39 ಹೆಣ ಚೀನೀಯರದ್ದು..!

ಲಂಡನ್​​​ನಲ್ಲಿ ಟ್ರಕ್​​ನಲ್ಲಿ ಪತ್ತೆಯಾದ 39 ಹೆಣಗಳು ಚೀನಾದ ವಲಸಿಗರು ಎಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ಹೆಣಗಳನ್ನು ಪತ್ತೆಹಚ್ಚೋದು ನಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ. ಈ ಮೃತದೇಹಗಳು ಚೀನೀ ಮೂಲದ ವಲಸಿಗರದ್ದು ಎಂದು ತಿಳಿದುಬಂದಿದೆ. ಈ ಬಗ್ಗೆ ಚೀನಾದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ 2000ರಲ್ಲಿ ಡಚ್ ಮೂಲದ ಲಾರಿಯೊಂದರಲ್ಲಿ 58 ಮಂದಿ ಚೀನೀಗಳ ಮೃತದೇಹ ಪತ್ತೆಯಾಗಿತ್ತು.

ನಿನ್ನೆ ಗ್ರೈಸ್ ಈಸ್ಟರ್ನ್ ಅವೆನ್ಯೂ ಬಳಿ ವಾಟರ್‌ಗ್ಲೇಡ್ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ನಿಂತಿರೋ ಕಂಟೇನರ್ ಒಳಗೆ ಮೃತದೇಹಗಳಿವೆ ಎಂದು ಮಾಹಿತಿ ಬಂದಿತ್ತು. ಹೀಗಾಗಿ ಪೊಲೀಸರು ಬಂದು ಪರಿಶೀಲಿಸಿದಾಗ ಮೃತದೇಹಗಳಿರೋದು ಪತ್ತೆಯಾಗಿತ್ತು. ಪ್ರಕರಣ ಸಂಬಂಧ  ಐರ್‌ಲೆಂಡ್‌ನ 25ರ ಹರೆಯದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಈ ಲಾರಿ ಬಲ್ಗೇರಿಯಾದಿಂದ ಬಂದಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ.

 

 

Contact Us for Advertisement

Leave a Reply