masthmagaa.com:

ಭಾರತದಲ್ಲಿ ಮತ್ತೆ 4 ಬ್ರಿಟನ್​ ಮಾದರಿಯ ಕೊರೋನಾ ರೂಪಾಂತರಿ ವೈರಸ್ ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ದೃಢಪಟ್ಟ ಬ್ರಿಟನ್​ ಕೊರೋನಾ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಆತಂಕದ ವಿಚಾರ ಅಂದ್ರೆ ಹೊಸದಾಗಿ ದೃಢಪಟ್ಟ 4 ಪ್ರಕರಣಗಳಲ್ಲಿ 3 ಪ್ರಕರಣ ಬೆಂಗಳೂರಿನಲ್ಲೇ ವರದಿಯಾಗಿದೆ. ಉಳಿದ 1 ಪ್ರಕರಣ ಹೈದ್ರಾಬಾದ್​ನಲ್ಲಿ ದೃಢಪಟ್ಟಿದೆ. ಈ ಮೂಲಕ ದೆಹಲಿ ಲ್ಯಾಬ್​ನಲ್ಲಿ 10, ಬೆಂಗಳೂರು ಲ್ಯಾಬ್​ನಲ್ಲಿ 10, ಪುಣೆಯಲ್ಲಿ 5, ಹೈದ್ರಾಬಾದ್​ನಲ್ಲಿ 3, ಕೋಲ್ಕತ್ತಾದಲ್ಲಿ 1 ಪ್ರಕರಣ ದೃಢಪಟ್ಟಂತಾಗಿದೆ. ಎಲ್ಲಾ ಸೇರಿ 29.. ಇವರೆಲ್ಲರನ್ನ ಸಪರೇಟ್​ ರೂಮ್​ಗಳಲ್ಲಿ ಐಸೋಲೇಷನ್​ಗೆ ಒಳಪಡಿಸಲಾಗಿದೆ. ಬ್ರಿಟನ್​ ಮಾದರಿಯ ಕೊರೋನಾ ವೈರಾಣು ಹರಡುವ ವೇಗ ತುಂಬಾ ಜಾಸ್ತಿ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ವರದಿಯಾಗಿರುವ 10 ಕೇಸ್​ಗಳಲ್ಲಿ 6 ಬೆಂಗಳೂರು ಮತ್ತು 4 ಶಿವಮೊಗ್ಗಕ್ಕೆ ಸೇರಿದ್ದು ಅಂತ ಹೇಳಲಾಗ್ತಿದೆ. ಆದ್ರೆ ರಾಜ್ಯ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಹೇಳಲ್ಲ. ಕೇಂದ್ರ ಸರ್ಕಾರ ಯಾವ ಲ್ಯಾಬ್​ನಲ್ಲಿ ಎಷ್ಟು ಕೇಸ್​ ದೃಢಪಟ್ಟಿದೆ ಅಂತ ಮಾತ್ರ ಹೇಳುತ್ತೆ.

-masthmagaa.com

Contact Us for Advertisement

Leave a Reply