ಸಾವಿರಾರು ಕೆಜಿ ಮಾದಕ ವಸ್ತುಗಳು ಪತ್ತೆ! ಹಿಂಗಾದ್ರೆ ದೇಶದ ಕಥೆಯೇನು?

masthmagaa.com:

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ 161 ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಐವರನ್ನು ಅರೆಸ್ಟ್ ಮಾಡಲಾಗಿದೆ. ಸಿಲೇರು ಪೊಲೀಸರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಮಾದಕ ವಸ್ತುಗಳ ಸಾಗಾಟದ ಬಗ್ಗೆ ಮಾಹಿತಿ ನೀಡಿದ್ದ. ಅದರಂತೆ ಪೊಲೀಸರು ಜಿಕೆ ನೀದಿ ಮಂಡಲ್ ಅನ್ನೋ ಗ್ರಾಮಕ್ಕೆ ಹೋಗಿದ್ದಾರೆ. ಈ ವೇಳೆ ಐವರು ಯುವಕರು ಬ್ಯಾಗ್ ಹಿಡಿದುಕೊಂಡು ಲೋಕಲ್ ಬಸ್​ ಸ್ಟಾಪ್​ನಲ್ಲಿ ನಿಂತ್ಕೊಂಡಿದ್ರು. ಈ ವೇಳೆ ಪೊಲೀಸರು ಚೆಕ್ ಮಾಡಿದಾಗ ಆ ಬ್ಯಾಗ್​​​ಳಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಸದ್ಯ ಎಲ್ಲರನ್ನು ಪೊಲೀಸ್ ಠಾಣೆಗೆ ಕರೆತಂದು ರುಬ್ತಿದ್ದಾರೆ. ಮತ್ತೊಂದ್ಕಡೆ ಕೋಲ್ಕತ್ತಾದಲ್ಲಿ ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿಯನ್ನು ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆತನ ಬಳಿ 26 ಕೋಟಿ ರೂಪಾಯಿ ಮೌಲ್ಯದ 5,177 ಕೆಜಿಯಷ್ಟು ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
-masthmagaa.com

Contact Us for Advertisement

Leave a Reply