ದೆಹಲಿ ವಿದಾನಸಭೆ ಸ್ಪೀಕರ್​​​​ಗೆ 6 ತಿಂಗಳು ಜೈಲು ಶಿಕ್ಷೆ..!

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಸ್ಪೀಕರ್ ರಾಮನಿವಾಸ್ ಗೋಯಲ್ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು 6 ತಿಂಗಳ ಜೈಲು ಶಿಕ್ಷೆ ನೀಡಿದೆ. ಬಿಜೆಪಿ ನಾಯಕ ಮನೀಶ್ ಘಯೀ ಎಂಬುವವರ ಮನೆಗೆ ಬಲವಂತವಾಗಿ ನುಗ್ಗಿದ ಕೇಸ್​ನಲ್ಲಿ ಈ ಶಿಕ್ಷೆ ಪ್ರಕಟಿಸಿದೆ. ಅಷ್ಟೇ ಅಲ್ಲ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್​​​​​ ರಾಮನಿವಾಸ್ ಗೋಯಲ್ ಜೊತೆಗೆ ಅವರ ಪುತ್ರ ಸುಮಿತ್ ಗೋಯಲ್ ಸೇರಿದಂತೆ ಐವರಿಗೆ  ತಲಾ 6 ತಿಂಗಳು ಶಿಕ್ಷೆ ಪ್ರಕಟಿಸಿದೆ. ಜೊತೆಗೆ ಒಂದೊಂದು ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ರಾಮ್​​​ ನಿವಾಸ್ ಗೋಯಲ್ ಹಾಗು ಈ ಐವರ ವಿರುದ್ಧ ಬಿಜೆಪಿ ನಾಯಕನ ಮನೆಗೆ ಬಲವಂತವಾಗಿ ನುಗ್ಗಿ, ಹಲ್ಲೆ ಮಾಡಿದ ಕೇಸ್ ದಾಖಲಾಗಿತ್ತು.

Contact Us for Advertisement

Leave a Reply