ದೆಹಲಿಯ 61 ಶಾಸಕರಲ್ಲಿ ಜನನ ಪ್ರಮಾಣ ಪತ್ರವಿಲ್ಲ: ಕೇಜ್ರಿವಾಲ್

masthmagaa.com

ದೆಹಲಿ: ಎನ್​ಪಿಆರ್​​ ಮತ್ತು ಎನ್​ಆರ್​​ಸಿ ವಿರುದ್ಧ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೆ ದೆಹಲಿ ಸರ್ಕಾರದ 70 ಮಂದಿ ಶಾಸಕರ ಪೈಕಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರವೇ ಇಲ್ಲ ಅನ್ನೋದು ತಿಳಿದುಬಂದಿದೆ. ಅಂದ್ರೆ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್​, ನಾನು, ನನ್ನ ಹೆಂಡತಿ ಮತ್ತು ಇಡೀ ಕ್ಯಾಬಿನೆಟ್​​ ಸದಸ್ಯರ ಬಳಿ ಜನನ ಪ್ರಮಾಣ ಪತ್ರವಿಲ್ಲ. ನಮ್ಮನ್ನು ಡಿಟೆನ್ಷನ್​ ಸೆಂಟರ್​​ಗೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ದೆಹಲಿ ವಿಧಾನಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರ್ಯಾರ ಬಳಿ ಜನನ ಪ್ರಮಾಣ ಪತ್ರ ಇದೆ ಕೈ ಎತ್ತಿ ನೋಡೋಣ ಎಂದಿದ್ದಾರೆ. ಈ ವೇಳೆ 61 ಮಂದಿ ಶಾಸಕರು ಕೈ ಎತ್ತದೇ ಕುಳಿತಿದ್ದರು.

ಇದನ್ನು ಬಿಗ್ ಮೆಸೇಜ್ ಎಂದು ಕರೆದಿರುವ ಕೇಜ್ರಿವಾಲ್​, ದೇಶದ ರಾಜಧಾನಿಯಲ್ಲಿ ಎನ್​ಪಿಆರ್ ಜಾರಿಗೆ ತರದಂತೆ ನಿರ್ಣಯ ಅಂಗೀಕರಿಸಲಾಗಿದೆ. ನಮ್ಮ ಸದನದ 61 ಶಾಸಕರ ಬಳಿ ಜನನ ಪ್ರಮಾಣ ಪತ್ರವಿಲ್ಲ. ಅವರನ್ನೂ ಡಿಟೆನ್ಷನ್ ಸೆಂಟರ್​​​ಗೆ ಕಳುಹಿಸುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ಅಲ್ಲದೆ ಕೇಂದ್ರ ಸಚಿವರು ತಮ್ಮ ಜನನ ಪ್ರಮಾಣ ಪತ್ರಗಳನ್ನು ತೋರಿಸಲಿ ನೋಡೋಣ ಅಂತ ಸವಾಲ್ ಎಸೆದಿದ್ದಾರೆ.

masthmagaa.com

Contact Us for Advertisement

Leave a Reply