ಉತ್ತರ ಪ್ರದೇಶದಲ್ಲಿ 9 ಕೆಜಿ ಚಿನ್ನ ವಶ! ಹೇಗೆ ಗೊತ್ತಾ?

masthmagaa.com:

ಉತ್ತರ ಪ್ರದೇಶದ ಲಕ್ನೋದಲ್ಲಿ ಒಟ್ಟು 9 ಕೆಜಿ ತೂಕದ 77 ಚಿನ್ನದ ಬಿಸ್ಕೆಟ್​​ ವಶಕ್ಕೆ ಪಡೆಯಲಾಗಿದೆ. ಸೌದಿಯಿಂದ ಮರಳಿದ್ದ ಇಬ್ಬರು ಚಿನ್ನ ಸ್ಮಗಲ್ ಮಾಡ್ತಿದ್ದು, ಲಕ್ನೋ ಏರ್​​ಪೋರ್ಟ್​​ಗೆ ಬರ್ತಿದ್ದಾರೆ ಅಂತ ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್​​ಗೆ ಮಾಹಿತಿ ಬಂದಿತ್ತು. ಅದರಂತೆ ಅಧಿಕಾರಿಗಳು ಖದೀಮರ ವಾಹನ ಅಡ್ಡಗಟ್ಟಿ ಗೋಲ್ಡ್ ಬಿಸ್ಕೆಟ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಣೆಗೆ ಸಹಕರಿಸಿದ ಹವಾಲ್ದಾರ್​​ನ್ನು ಕೂಡ ಅರೆಸ್ಟ್ ಮಾಡಲಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply