ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಗಿಫ್ಟ್

masthmagaa.com:

ಪ್ರಧಾನಿ ಮೋದಿಯ ಅಧಿಕೃತ ನಿವಾಸ ಸೆವೆನ್ ಲೋಕ್​​ ಕಲ್ಯಾಣ್​ ಮಾರ್ಗ್​ನಲ್ಲಿ ಇವತ್ತು ಕೇಂದ್ರ ಸಚಿವ ಸಂಪುಟ ಸಭೆ ನಡೀತು. ಕ್ಯಾಬಿನೆಟ್​ ಸಭೆಯಲ್ಲಿ ಹಲವು ನಿರ್ಧಾರಗಳನ್ನ ತೆಗೆದುಕೊಳ್ಳಲಾಯ್ತು. ಪ್ರಮುಖವಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡುತ್ತಿದ್ದ 17 ಪರ್ಸೆಂಟ್​ ಡಿಯರ್​ನೆಸ್​ ಅಲೋವೆನ್ಸ್​-ಡಿಎ ಮತ್ತು ಡಿಯರ್​ನೆಸ್​​ ರಿಲೀಫ್​-ಡಿಆರ್​ ಅನ್ನ 28 ಪರ್ಸೆಂಟ್​​ಗೆ ಏರಿಸೋ ನಿರ್ಧಾರ ಕೈಗೊಳ್ಳಲಾಯ್ತು. ಇದು ಜುಲೈ 1, 2021ರಿಂದಲೇ ಜಾರಿಗೆ ಬರಲಿದೆ. ಇದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ 34,401 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಆದ್ರೆ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 65.26 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ ಅಂತ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಡಿಯರ್​ನೆಸ್​ ಅಲೋವೆನ್ಸ್ ಅಥವಾ ಡಿಎ ಅಂದ್ರೆ ತುಟ್ಟಿಭತ್ಯೆ ಅಂತ. ಹಣದುಬ್ಬರದ ಪ್ರಭಾವವನ್ನ ಸರಿದೂಗಿಸಲು ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಈ ಭತ್ಯೆಯನ್ನ ನೀಡುತ್ತೆ. ಇನ್ನು ನ್ಯಾಷನಲ್ ಆಯುಷ್​ ಮಿಷನ್​ ಅನ್ನ 2026ರ ಮಾರ್ಚ್​ 31ರವರೆಗೆ ಮುಂದುವರಿಸಲು ಮತ್ತು ಅದಕ್ಕೆ 4,600 ಕೋಟಿ ರೂಪಾಯಿ ನೀಡಲು ಕ್ಯಾಬಿನೆಟ್​ ಸಭೆಯಲ್ಲಿ ನಿರ್ಧರಿಸಲಾಯ್ತು.

-masthmagaa.com

Contact Us for Advertisement

Leave a Reply