ಫಿಲಿಪ್ಪೀನ್ಸ್, ಚೀನಾದಲ್ಲಿ ಭಾರೀ ಪ್ರವಾಹ! ಕಲ್ಲಿದ್ದಲು ಗಣಿ ಎಲ್ಲಾ ಮುಚ್ಚೋಗ್ತಿದೆ!

masthmagaa.com:

ಫಿಲಿಪ್ಪೀನ್ಸ್‌ನಲ್ಲಿ ಭಾರೀ ಪ್ರವಾಹ, ಭೂಕುಸಿತ ಉಂಟಾಗಿದೆ. ಇದುವರೆಗೂ ಕನಿಷ್ಠ 9 ಜನ ಪ್ರಾಣ ಕಳೆದುಕೊಂಡಿದ್ದಾರೆ. 11ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಕೊಂಪಾಸು ಚಂಡಮಾರುತ ಅಪ್ಪಳಿಸಿದ ಹೊಡೆತಕ್ಕೆ ಲೂಜುನ್ ದ್ವೀಪ ಸೇರಿದಂತೆ ಇಡೀ ಫಿಲಿಪ್ಪೀನ್ಸ್ ತ್ತರಿಸಿ ಹೋಗಿದೆ.
ಅತ್ತ ಫಿಲಿಪ್ಪೀನ್ಸ್‌ಗೆ ಹತ್ತಿರದಲ್ಲೇ ಇರೋ ಚೀನಾದಲ್ಲೂ ವಿಪರೀತ ಮಳೆಯಾಗಿ ಪ್ರವಾಹ ಆಗಿದೆ. ಉತ್ತರ ಚೀನಾದ ಶಾನ್ಶಿ ಪ್ರಾಂತ್ಯದಲ್ಲಿ ಹೊತ್ತಲ್ಲದ ಹೊತ್ತಿಗೆ ಅಪ್ಪಳಿಸಿದ ಭಾರೀ ಮಳೆಯಿಂದಾಗಿ 15ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ಚೀನಾದಲ್ಲಿ ಕಲ್ಲಿದ್ದಲು ಕೊರತೆಯಿಂದ ಪವರ್ ಕಟ್ ಆಗ್ತಿದೆ. ಇದೇ ಟೈಮಲ್ಲಿ ಚೀನಾದ ಹಲವು ಕಲ್ಲಿದ್ದಲು ಗಣಿ ಚೆನ್ನಾಗಿರೋ ಪ್ರಾಂತ್ಯಗಳಲ್ಲೇ ಪ್ರವಾಹ ಆಗಿ ಗಣಿಯೆಲ್ಲ ಮುಚ್ಚಿ ಹೋಗಿದೆ. 60ಕ್ಕೂ ಅಧಿಕ ಕಲ್ಲಿದ್ದಲು ಗಣಿಗಳು ಬಂದ್ ಆಗಿವೆ. ಇದು ಚೀನಾದ ಪವರ್ ಬಿಕ್ಕಟ್ಟಿನ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರ್ತಿದೆ. ಚೀನಾದಲ್ಲಿ ಕಲ್ಲಿದ್ದಲು ಸರಿಯಾಗಿ ಸಿಕ್ಕಿಲ್ಲ ಅಂದ್ರೆ ಅವ್ರು ದುಡ್ಡಿನ ಚೀಲ ಎತ್ಕೊಂಡು ಇಡೀ ಜಗತ್ತಿನಾದ್ಯಂತ ಬಾಯಿಗೆ ಬಂದ ದುಬಾರಿ ಬೆಲೆ ಪರ್ಚೇಸ್ ಮಾಡ್ತಾರೆ. ಇದ್ದಬದ್ದ ಕಲ್ಲಿದ್ದಲೆಲ್ಲ ಬಾಚಿಕೊಂಡು ಹೋಗ್ತಾರೆ. ಇದಿಂರ ಅಂತಾರಾಷ್ಟ್ರೀಯ ಮಾರ್ಕೆಟಲ್ಲಿ ಕಲ್ಲಿದ್ದಲು ಬೆಲೆ ಏರಿಕೆ ಆಗುತ್ತೆ. ಸ್ಟಾಕೂ ಸಿಗಲ್ಲ. ಅದರ ಪರಿಣಾಮ ಖಂಡಿತ ಭಾರತ ಸೇರಿ ಜಗತ್ತಿನ ಇತರ ದೇಶಗಳ ಮೇಲೂ ಆಗುತ್ತೆ. ಈಗಾಗಲೇ ಭಾರತದಲ್ಲೂ ಪವರ್ ಕಟ್ ಎಲ್ಲ ಶರುವಾಗಿರೋದು ನಿಮಗೆಲ್ಲ ಗೊತ್ತೇ ಇದೆ.

-masthmagaa.com

Contact Us for Advertisement

Leave a Reply