ಭಾರತೀಯ ಪ್ರಜೆಗಳಲ್ಲದ ಪಾಪುಲರ್‌ ಸೆಲೆಬ್ರಿಟಿಗಳು ಇವರೇ ನೋಡಿ!

masthmagaa.com:

ಭಾರತದ ಪೌರತ್ವವನ್ನೇ ಪಡೆದುಕೊಳ್ಳದೇ ಕಲಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿ ಪಾಪುಲರ್‌ ಆಗಿರುವ ಕಲಾವಿದರು ನಮ್ಮ ದೇಶದಲ್ಲಿ ಸಾಕಷ್ಟು ಜನ ಇದ್ದಾರೆ. ಅಷ್ಟೇ ಯಾಕೆ ಭಾರತದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾದ ಬಾಲಿವುಡ್‌ ಖಿಲಾಡಿ ಅಕ್ಷಯ್‌ ಕುಮಾರ್‌ ಕೂಡ ಭಾರತದ ಪ್ರಜೆ ಅಲ್ಲ. ಮೂಲತಃ ಕೆನಡಾದ ಪ್ರಜೆಯಾಗಿರುವ ಅಕ್ಷಯ್‌ ಕುಮಾರ್‌ ಭಾರತ ಸರ್ಕಾರ ನೀಡಿರುವ ಸಾಗರೋತ್ತರ ವೀಸಾ ಅಥವಾ OCI ಕಾರ್ಡ್‌ ಪಡೆದುಕೊಂಡು ಭಾರತದಲ್ಲಿ ಈ ದೇಶದ ಪ್ರಜೆಯಂತೆಯೇ ವಾಸಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಸೋ ಕಾಲ್ಡ್‌ ಸಾಮಾಜಿಕ ಹೋರಾಟಗಾರ ಮತ್ತು ನಟ ಚೇತನ್‌ ಅಹಿಂಸಾ OCI ಕಾರ್ಡ್‌ನ್ನ ಹೊಂದಿದ್ದಾರೆ. ಅವ್ರಷ್ಟೇ ಅಲ್ಲ ಬಹಳ ಜನ ಸೆಲೆಬ್ರಿಟಿಗಳು OCI ಕಾರ್ಡ್‌ ಹೊಂದಿದಾರೆ, ಅವ್ರು ಯಾರ್ಯಾರು ಅಂತ ನೋಡೊದಾದ್ರೆ.

– ಅಕ್ಷಯ್‌ ಕುಮಾರ್‌, ಇವ್ರು ಭಾರತದವರಾಗಿದ್ರು ಕೂಡ ಕೆನಡಾದ ಪ್ರಜೆಯಾಗಿದ್ದಾರೆ. ಕೆನಡಾದ ಪಾಸ್‌ಪೋರ್ಟ್‌ ಸಖತ್‌ ಪವರ್‌ಫುಲ್‌, ಬಹಳ ಯುರೋಪಿಯನ್‌ ದೇಶಗಳಿಗೆ ವೀಸಾ ಇಲ್ಲದೆನೇ ಕೇವಲ ಕೆನಡಾ ಪಾಸ್‌ಪೋರ್ಟ್‌ ಇಟ್ಕೊಂಡು ಹೋಗ್ಬಹುದು. ಹೀಗಾಗಿ ಅಕ್ಷಯ್‌ ಕುಮಾರ್‌ ಕೆನಡಾ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸಿದ್ರು ಅನ್ಸುತ್ತೆ. ಜೊತೆಗೆ 2011ರ ಎಲೆಕ್ಷನ್‌ನಲ್ಲಿ ಅಲ್ಲಿನ ಕನ್ಸರ್ವೇಟಿವ್‌ ಪಕ್ಷಕ್ಕೆ, ಕೆನಡಾದಲ್ಲಿ ಪಂಜಾಬಿಗರು ದೊಡ್ಡ ಸಂಖ್ಯೆಯಲ್ಲಿ ಇರೋದ್ರಿಂದ ಚುನಾವಣೆಯಲ್ಲಿ ಹೆಲ್ಪ್‌ ಮಾಡಿದ್ರು, ಅದಕ್ಕೆ ಕೆನಡಾ ಸರ್ಕಾರ ಅಕ್ಷಯ್‌ ಕುಮಾರ್‌ ಅವ್ರಿಗೆ ಕೆನಡಾ ಪೌರತ್ವ ನೀಡಿದೆ. ಹೀಗಾಗಿ ಇವ್ರು ಭಾರತದಲ್ಲಿ OCI ಕಾರ್ಡ್‌ನ್ನ ಹೊಂದಿದಾರೆ. ಆದ್ರೆ 2019ರಲ್ಲಿ ಅಕ್ಷಯ್‌ ಕುಮಾರ್‌ ಇಂಡಿಯನ್‌ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡಿದೀನಿ, ಕೆನಡಾ ಸಿಟಿಜೆನ್‌ಶಿಪ್‌ನ್ನ ಬಿಟ್ಟುಬಿಡ್ತೀನಿ ಅಂತ ಹೇಳಿದ್ರು.

– ಅಲಿಯಾ ಭಟ್‌, ಬಾಲಿವುಡ್‌ ನಟಿಯಾದ ಇವ್ರು ಬ್ರಿಟನ್‌ ಪ್ರಜೆ. ಅವ್ರ ತಾಯಿ ನಟಿ ಸೋನಿ ರಾಜ್ದಾನ್‌ ಕೂಡ ಕಾಶ್ಮೀರಿ ಪಂಡಿತ್‌ ಆದ್ರು ಬ್ರಿಟಿಷ್‌ ಜರ್ಮನ್‌.

– ಕತ್ರೀನಾ ಕೈಫ್‌, ಅಥವಾ ಕತ್ರೀನಾ ಟರ್ಕೋಟ್‌ ಆದ ಇವ್ರು ಬಾಲಿವುಡ್‌ ನಟಿ. ಆದ್ರೆ ಇವ್ರು ಬ್ರಿಟನ್‌ ಪ್ರಜೆಯಾಗಿದ್ದಾರೆ.

– ಇಲಿಯಾನ ಡಿʻಕ್ರೂಜ್‌, ಇವ್ರು ಬಹುಭಾಷಾ ನಟಿ ಆದ್ರೆ ಪೋರ್ಚುಗೀಸ್‌ ಮೂಲದವ್ರು.

-ನೋರಾ ಫತೇಹಿ, ಬಾಲಿವುಡ್‌ ನಟಿಯಾದ ಇವ್ರು ಕೆನಡಾದ ಪ್ರಜೆಯಾಗಿದ್ದಾರೆ.

– ಜಾಕ್ವೆಲಿನ್‌ ಫರ್ನಾಂಡೀಸ್‌, ಇವ್ರು ಕೂಡ ಬಾಲಿವುಡ್‌ ನಟಿಯಾಗಿದ್ದು ಶ್ರೀಲಂಕಾ ಪ್ರಜೆಯಾಗಿದ್ದಾರೆ.

– ನರ್ಗಿಸ್‌ ಫಕ್ರಿ, ನರ್ಗಿಸ್‌ ಫಕ್ರಿಯವ್ರು ಕೂಡ ಬಾಲಿವುಡ್‌ ನಟಿಯಾಗಿದ್ದು ಅಮೆರಿಕದ ಪ್ರಜೆಯಾಗಿದ್ದಾರೆ.

– ಅದ್ನಾನ್‌ ಸಾಮಿ, ಇವ್ರು ಪಾಕ್‌ ಮೂಲದ ಸಿಂಗರ್‌. ಇವ್ರ ತಂದೆ ಪಾಕ್‌ ವಾಯುಸೇನೆಯಲ್ಲಿ ಪೈಲಟ್‌ ಕೂಡ ಆಗಿದ್ರು ನಂತ್ರ ಹಲವು ದೇಶಗಳಿಗೆ ಪಾಕ್‌ನ ರಾಯಭಾರಿ ಕೂಡ ಆಗಿದ್ರು. ಇದೀಗ ಇವ್ರು ಭಾರತದಲ್ಲೇ ಸೆಟಲ್‌ ಆಗಿದಾರೆ. 2016ರಲ್ಲಿ ಭಾರತದ ಪೌರತ್ವ ಪಡೆದುಕೊಂಡಿದಾರೆ. ಅದಕ್ಕೂ ಮೊದಲು 15 ವರ್ಷ OCI ಕಾರ್ಡ್‌ನಲ್ಲಿದ್ರು.

– ಅಖಿಲ್‌ ಅಕ್ಕಿನೇನಿ, ತೆಲಗು ನಟರಾದ ಇವ್ರು ನಾಗಾರ್ಜುನ್‌ ಅವ್ರ ಮಗ, ANR ಅವ್ರ ಮೊಮ್ಮಗ. ಆದ್ರೆ ಇವ್ರು ಅಮೆರಿಕದ ಪ್ರಜೆ, ಅಲ್ಲೇ ಹುಟ್ಟಿ ಬೆಳದದ್ದು.

– ಸನ್ನಿ ಲಿಯೋನಿ, ಇವ್ರ ಬಗ್ಗೆ ನಿಮಗೆಲ್ಲ ಗೊತ್ತೇ ಇರುತ್ತೆ. ಇವ್ರು ಕೆನಡಾ ಮೂಲದವ್ರು.

 

-ಕಲ್ಕಿ ಕೊಯ್ಕಿನ್‌ ಬಾಲಿವುಡ್‌ನಲ್ಲಿ ಸಕ್ರೀಯವಾಗಿ ಆಕ್ಟೀವ್‌ ಇರುವ ಈಕೆ ಮೂಲತಃ ಫ್ರೆಂಚ್‌ನವರು.

– ಕ್ರಿಕೆಟರ್‌ಗಳಾದ ಮುತ್ತಯ್ಯ ಮುರಳೀಧರನ್‌, ಮಾಂಟಿ ಪೆನೆಸರಾ, ಶಾನ್‌ ಟೈಟ್‌
ಇವರೆಲ್ಲ ಭಾರತದ OCI ಕಾರ್ಡ್‌ಹೋಲ್ಡರ್‌ ಹೊಂದಿ ಹೆಚ್ಚೂ ಕಡಿಮೆ ಭಾರತದ ಪ್ರಜೆಯಂತೇ ಭಾರತದಲ್ಲಿದಾರೆ.

-masthmagaa.com

Contact Us for Advertisement

Leave a Reply