masthmagaa.com:
ಬಿಜೆಪಿಯಿಂದ ಲೋಕಸಭಾ ಟಿಕೆಟ್ ಪಡ್ಕೊಂಡಿರೊ ಚಿತ್ರ ನಟಿ ಕಂಗನಾ ರಣೌತ್ ವಿರುದ್ದ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆ ಸುಪ್ರೀಯಾ ಶ್ರೀನಾಥೆ ಅಶ್ಲೀಲ ಕಮೆಂಟ್ ಮಾಡಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಈ ಕಮೆಂಟ್ಗೆ ಬಿಜೆಪಿ ಭಾರಿ ವಿರೋಧ ವ್ಯಕ್ತ ಪಡಿಸಿದ್ದು, ಬಿಜೆಪಿ ನಾಯಕ ಅಮಿತ್ ಮಾಳ್ವಿಯಾ, ಶೆಹಬಾಜ್ ಪೂನಾವಾಲಾ ಇದೊಂದು ಅಸಹ್ಯಕರ ಕಮೆಂಟ್ ಅಂತೇಳಿ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರವಾಗಿ ಸ್ವತಃ ಕಂಗನಾ ಕೂಡ ಪ್ರತಿಕ್ರಿಯೆ ನೀಡಿದ್ದು, ʻಸುಪ್ರೀಯಾ ಅವ್ರೇ ನನ್ನ 20 ವರ್ಷ ಬಣ್ಣದ ಲೋಕದಲ್ಲಿ ಝಾನ್ಸಿ ರಾಣಿ, ಇಂದಿರಾ ಗಾಂಧಿ ಸೇರಿದಂತೆ ವಿವಿಧ ಮಹಿಳೆಯರ ಪಾತ್ರವನ್ನ ನಿಭಾಯಿಸಿದ್ದೇನೆ. ನಿಮಗಿದು ಗೊತ್ತಿರಲಿʼ ಅಂತ ತಿರುಗೇಟು ನೀಡಿದ್ದಾರೆ.
-masthmagaa.com
Contact Us for Advertisement