masthmagaa.com:
ಪಾಕಿಸ್ತಾನದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗ್ತಿರೋ ಈ ಒಂದು ಫೋಟೋ ಅಲ್ಲಿನ ಕಟ್ಟರ್ಪಂಥಿಗಳ ಬುಡಕ್ಕೆ ಮೆಣಶಿನಕಾಯಿ ಇಟ್ಟಂತೆ ಮಾಡಿದೆ. ಖ್ಯಾತ ವೈದ್ಯ ಜಾವೇದ್ ಇಕ್ಬಾಲ್ ತಮ್ಮ ವಿದ್ಯಾರ್ಥಿಗಳೊಂದಿಗೆ ತೆಗೆದ ಈ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ರು. ಅದ್ರ ಜೊತೆಗೆ ಯುವತಿಯರು ಸರ್ಜರಿ ಮಾಡಲ್ಲ ಅಂತ ಯಾರು ಹೇಳಿದ್ದು? ಈ ಯುವತಿಯರೆಲ್ಲಾ ಸರ್ಜನ್ಗಳೇ ಆಗಿದ್ದು, ಇವರಿಗೆ ಟ್ರೇನಿಂಗ್ ಕೊಡ್ತಿರೋದಕ್ಕೆ ನನಗೆ ಹೆಮ್ಮೆ ಇದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯುವತಿಯರು ಎಲ್ಲರಿಗೂ ಮಾದರಿ ಅಂತ ಹೇಳಿದ್ದಾರೆ. ಆದ್ರೆ ಇದು ಅಲ್ಲಿನ ಕಟ್ಟರ್ಪಂಥಿ ನಾಯಕರಿಗೆ ಇಷ್ಟವಾಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈದ್ಯ ಜಾವೇದ್ರನ್ನು ಹಿಗ್ಗಾಮುಗ್ಗಾ ಉಜ್ಜಾಡ್ತಿದ್ದಾರೆ. ಅಂದಹಾಗೆ ಪಾಕಿಸ್ತಾನದಲ್ಲಿ ಮಹಿಳಾ ವೈದ್ಯರ ಸಂಖ್ಯೆ ತುಂಬಾ ಕಡಿಮೆ ಇದೆ. ಇದ್ರಿಂದಾಗಿ ಮಹಿಳೆಯರು ಪುರಷ ವೈದ್ಯರ ಬಳಿಯೇ ಹೋಗಿ ಚಿಕಿತ್ಸೆ ಪಡೀಬೇಕಾಗುತ್ತೆ. ಇದ್ರಿಂದ ಹಲವು ತೊಂದ್ರೆಗಳು ಕೂಡ ಎದುರಾಗ್ತಿವೆ.
-masthmagaa.com
Contact Us for Advertisement