ಪಾಕ್ ಡಾಕ್ಟರ್ ಶೇರ್ ಮಾಡಿದ್ರು ಈ ಫೋಟೋ.. ಫುಲ್ ವೈರಲ್!

masthmagaa.com:

ಪಾಕಿಸ್ತಾನದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗ್ತಿರೋ ಈ ಒಂದು ಫೋಟೋ ಅಲ್ಲಿನ ಕಟ್ಟರ್​ಪಂಥಿಗಳ ಬುಡಕ್ಕೆ ಮೆಣಶಿನಕಾಯಿ ಇಟ್ಟಂತೆ ಮಾಡಿದೆ. ಖ್ಯಾತ ವೈದ್ಯ ಜಾವೇದ್ ಇಕ್ಬಾಲ್ ತಮ್ಮ ವಿದ್ಯಾರ್ಥಿಗಳೊಂದಿಗೆ ತೆಗೆದ ಈ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ರು. ಅದ್ರ ಜೊತೆಗೆ ಯುವತಿಯರು ಸರ್ಜರಿ ಮಾಡಲ್ಲ ಅಂತ ಯಾರು ಹೇಳಿದ್ದು? ಈ ಯುವತಿಯರೆಲ್ಲಾ ಸರ್ಜನ್​​ಗಳೇ ಆಗಿದ್ದು, ಇವರಿಗೆ ಟ್ರೇನಿಂಗ್ ಕೊಡ್ತಿರೋದಕ್ಕೆ ನನಗೆ ಹೆಮ್ಮೆ ಇದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯುವತಿಯರು ಎಲ್ಲರಿಗೂ ಮಾದರಿ ಅಂತ ಹೇಳಿದ್ದಾರೆ. ಆದ್ರೆ ಇದು ಅಲ್ಲಿನ ಕಟ್ಟರ್​ಪಂಥಿ ನಾಯಕರಿಗೆ ಇಷ್ಟವಾಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈದ್ಯ ಜಾವೇದ್​​​​​​ರನ್ನು ಹಿಗ್ಗಾಮುಗ್ಗಾ ಉಜ್ಜಾಡ್ತಿದ್ದಾರೆ. ಅಂದಹಾಗೆ ಪಾಕಿಸ್ತಾನದಲ್ಲಿ ಮಹಿಳಾ ವೈದ್ಯರ ಸಂಖ್ಯೆ ತುಂಬಾ ಕಡಿಮೆ ಇದೆ. ಇದ್ರಿಂದಾಗಿ ಮಹಿಳೆಯರು ಪುರಷ ವೈದ್ಯರ ಬಳಿಯೇ ಹೋಗಿ ಚಿಕಿತ್ಸೆ ಪಡೀಬೇಕಾಗುತ್ತೆ. ಇದ್ರಿಂದ ಹಲವು ತೊಂದ್ರೆಗಳು ಕೂಡ ಎದುರಾಗ್ತಿವೆ.

-masthmagaa.com

Contact Us for Advertisement

Leave a Reply