masthmagaa.com:
ಮಳೆಗಾಲದ ಸಂಸತ್ ಅಧಿವೇಶನ ಜುಲೈ 19ರಿಂದ ಆಗಸ್ಟ್ 13ರವರೆಗೆ 19 ದಿನಗಳ ಕಾಲಕ ನಡೆಯಲಿದೆ ಅಂತ ಲೋಕಸಭೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 11ರಿಂದ ಸಂಜೆ 6 ಗಂಟೆವರೆಗೆ ಉಭಯಸದನಗಳ ಅಧಿವೇಶನ ನಡೆಯಲಿದ್ದು, ಕೊರೋನಾದ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತೆ. ಈಗಾಗಲೇ 323 ಮಂದಿ ಸಂಸದರು ಈಗಾಗಲೇ ಕಂಪ್ಲೀಟಾಗಿ ಲಸಿಕೆ ಹಾಕಿಸಿಕೊಂಡಿದ್ದು, 23 ಮಂದಿ ವೈದ್ಯಕೀಯ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಲಸಿಕೆ ಹಾಕಿಸಿಕೊಂಡೋರು ಆರ್ಟಿಪಿಸಿಆರ್ ಪರೀಕ್ಷೆ ಮಾಡೋ ಅಗತ್ಯ ಇಲ್ಲ. ಉಳಿದೋರು ಪರೀಕ್ಷೆ ಮಾಡಿಸ್ಕೊಂಡು ಬನ್ನಿ ಅಂತ ಮನವಿ ಮಾಡಿದ್ದೀವಿ ಅಂದ್ರು.
-masthmagaa.com
Contact Us for Advertisement