ಜುಲೈ 19ರಿಂದ ಮಳೆಗಾಲದ ಸಂಸತ್ ಅಧಿವೇಶನ

masthmagaa.com:

ಮಳೆಗಾಲದ ಸಂಸತ್ ಅಧಿವೇಶನ ಜುಲೈ 19ರಿಂದ ಆಗಸ್ಟ್​ 13ರವರೆಗೆ 19 ದಿನಗಳ ಕಾಲಕ ನಡೆಯಲಿದೆ ಅಂತ ಲೋಕಸಭೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 11ರಿಂದ ಸಂಜೆ 6 ಗಂಟೆವರೆಗೆ ಉಭಯಸದನಗಳ ಅಧಿವೇಶನ ನಡೆಯಲಿದ್ದು, ಕೊರೋನಾದ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತೆ. ಈಗಾಗಲೇ 323 ಮಂದಿ ಸಂಸದರು ಈಗಾಗಲೇ ಕಂಪ್ಲೀಟಾಗಿ ಲಸಿಕೆ ಹಾಕಿಸಿಕೊಂಡಿದ್ದು, 23 ಮಂದಿ ವೈದ್ಯಕೀಯ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಲಸಿಕೆ ಹಾಕಿಸಿಕೊಂಡೋರು ಆರ್​ಟಿಪಿಸಿಆರ್ ಪರೀಕ್ಷೆ ಮಾಡೋ ಅಗತ್ಯ ಇಲ್ಲ. ಉಳಿದೋರು ಪರೀಕ್ಷೆ ಮಾಡಿಸ್ಕೊಂಡು ಬನ್ನಿ ಅಂತ ಮನವಿ ಮಾಡಿದ್ದೀವಿ ಅಂದ್ರು.

-masthmagaa.com

Contact Us for Advertisement

Leave a Reply