masthmagaa.com:
ಇದ್ರ ನಡುವೆಯೇ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ರಾಯಭಾರಿಯ ಮಗಳ ಅಪಹರಣ ವಿಚಾರ ತುಂಬಾ ದೊಡ್ಡದಾಗ್ತಿದೆ. ಇದ್ರಿಂದ ಕೆರಳಿರುವ ಅಫ್ಘಾನಿಸ್ತಾನದ ಪಾಕಿಸ್ತಾನದಲ್ಲಿದ್ದ ತನ್ನ ರಾಯಭಾರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳೋದಾಗಿ ಘೋಷಿಸಿದೆ. ಆದ್ರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹೋಗ್ತಿರೋ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್ಗೆ ಪಾಕ್ ಮುಂದಾಗಿದೆ. ಪಾಕ್ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೊಹ್ಮದ್ ಹನೀಫ್ ಅತ್ಮರ್ಗೆ ಕರೆ ಮಾಡಿ ಮಾತನಾಡಿದ್ದಾರೆ. ಕಿಡ್ನಾಪ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಪಾಕ್ ಎಲ್ಲಾ ರೀತಿಯ ಹೆಜ್ಜೆ ಇಡ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಅಫ್ಘಾನಿಸ್ತಾನ ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರವನ್ನು ಪುನರ್ ಪರಿಶೀಲನೆ ನಡೆಸಬೇಕು ಅಂತ ಮನವಿ ಮಾಡಿದ್ದಾರೆ. ಅಂದಹಾಗೆ ಕಳೆದ ಜುಲೈ 16ರಂದು ಪಾಕ್ನಲ್ಲಿರೋ ಅಫ್ಘಾನಿಸ್ತಾನ ರಾಯಭಾರಿ ನಜಿಬುಲ್ಲಾ ಅಲಿಖಿಲ್ ಅವರ ಮಗಳು ಸಿಲ್ಸಿಲಾ ಅಲಿಖಿಲ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ರು. ನಂತ್ರ ಚಿತ್ರಹಿಂಸೆ ಮಾಡಿ ಬಿಡುಗಡೆ ಮಾಡಿದ್ರು. ಆದ್ರೆ ಪೊಲೀಸರು ಮಾತ್ರ ಸಿಲ್ಸಿಲಾ ಅಲಿಖಿಲ್ ಅಪಹರಣವಾಗಿರೋದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement