ಅಫ್ಘಾನಿಸ್ತಾನದ ಬಳಿ ಪಾಕ್ ಅಂಗಲಾಚಿ ಬೇಡಿದ್ದೇನು ಗೊತ್ತಾ?

masthmagaa.com:

ಇದ್ರ ನಡುವೆಯೇ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ರಾಯಭಾರಿಯ ಮಗಳ ಅಪಹರಣ ವಿಚಾರ ತುಂಬಾ ದೊಡ್ಡದಾಗ್ತಿದೆ. ಇದ್ರಿಂದ ಕೆರಳಿರುವ ಅಫ್ಘಾನಿಸ್ತಾನದ ಪಾಕಿಸ್ತಾನದಲ್ಲಿದ್ದ ತನ್ನ ರಾಯಭಾರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳೋದಾಗಿ ಘೋಷಿಸಿದೆ. ಆದ್ರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹೋಗ್ತಿರೋ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್​​ಗೆ ಪಾಕ್ ಮುಂದಾಗಿದೆ. ಪಾಕ್ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೊಹ್ಮದ್ ಹನೀಫ್ ಅತ್ಮರ್​​ಗೆ ಕರೆ ಮಾಡಿ ಮಾತನಾಡಿದ್ದಾರೆ. ಕಿಡ್ನಾಪ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಪಾಕ್ ಎಲ್ಲಾ ರೀತಿಯ ಹೆಜ್ಜೆ ಇಡ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಅಫ್ಘಾನಿಸ್ತಾನ ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರವನ್ನು ಪುನರ್​ ಪರಿಶೀಲನೆ ನಡೆಸಬೇಕು ಅಂತ ಮನವಿ ಮಾಡಿದ್ದಾರೆ. ಅಂದಹಾಗೆ ಕಳೆದ ಜುಲೈ 16ರಂದು ಪಾಕ್​​ನಲ್ಲಿರೋ ಅಫ್ಘಾನಿಸ್ತಾನ ರಾಯಭಾರಿ ನಜಿಬುಲ್ಲಾ ಅಲಿಖಿಲ್ ಅವರ ಮಗಳು ಸಿಲ್ಸಿಲಾ ಅಲಿಖಿಲ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ರು. ನಂತ್ರ ಚಿತ್ರಹಿಂಸೆ ಮಾಡಿ ಬಿಡುಗಡೆ ಮಾಡಿದ್ರು. ಆದ್ರೆ ಪೊಲೀಸರು ಮಾತ್ರ ಸಿಲ್ಸಿಲಾ ಅಲಿಖಿಲ್ ಅಪಹರಣವಾಗಿರೋದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply