masthmagaa.com:
ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಜೊತೆ ಲಿಂಕ್ ಹೊಂದಿದ್ದ ಆರೋಪದಲ್ಲಿ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಜಿತೇಂದ್ರ ಸಿಂಗ್ನನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ವಿರುದ್ಧ ದಾಖಲಾಗಿರೋ ಎಫ್ಐಆರ್ನಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ಈತ ವಾಟ್ಸಾಪ್ನಲ್ಲಿ ಕರಾಚಿಯ ಐಎಸ್ಐ ಏಜೆಂಟ್ ಜೊತೆ ಚಾಟ್ ಮಾಡ್ತಿದ್ದ. ಫೋಟೋ, ವಿಡಿಯೋ, ಆಡಿಯೋಗಳನ್ನ ಶೇರ್ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಐಎಸ್ಐ ಏಜೆಂಟ್ ತನ್ನನ್ನ ತಾನು ಪೂಜಾ ಅಂತ ಪರಿಸಿಕೊಂಡಿದ್ದಳು. 72ರಿಂದ ಆರಂಭವಾಗಿ ಎಂಡ್ನಲ್ಲಿ 87 ನಂಬರ್ ಇದ್ದ ಮೊಬೈಲ್ ನಂಬರ್ ಮೂಲಕ ಕಾಂಟ್ಯಾಕ್ಟ್ ಇತ್ತು. ಈ ನಂಬರ್ ಅನ್ನ ‘ಪೂಜಾ ಜೀ’ ಅಂತ ನಂಬರ್ ಸೇವ್ ಮಾಡಿದ್ದ. ಈತನ ನಂಬರ್ 95ರಿಂದ ಆರಂಭವಾಗಿ 84ನಲ್ಲಿ ಅಂತ್ಯವಾಗಿತ್ತು ಅನ್ನೋದು ಗೊತ್ತಾಗಿದೆ. ಈತನ ಬಳಿಯಿದ್ದ ಮೊಬೈಲ್, ಸಿಮ್, ಮಿಲಿಟರಿ ಸಮವಸ್ತ್ರವನ್ನ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ಕಾಟನ್ ಪೇಟೆ ಬಳಿಯ ಜಾಲಿ ಮೊಹಲ್ಲಾದಲ್ಲಿ ನಾಲ್ವರ ಜೊತೆ ವಾಸವಿದ್ದ ಈತನನ್ನ ನಿನ್ನೆ ಸೇನಾ ಗುಪ್ತಚರ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಬಟ್ಟೆ ವ್ಯಾಪಾರಿ ಅಂತ ಹೇಳಿಕೊಂಡಿದ್ದ ಈ ಜಿತೇಂದ್ರ ಸಿಂಗ್ ಪಾಕಿಸ್ತಾನದ ಏಜೆಂಟ್ಗೆ ಭಾರತೀಯ ಸೇನೆ, ಭದ್ರತೆ, ರಕ್ಷಣೆಗೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನ ಕಳಿಸಿದ್ದ.
-masthmagaa.com
Contact Us for Advertisement