ಪಾಕ್​​ನ ‘ಪೂಜಾ ಜೀ’ಗೆ ಫೋಟೋ, ವಿಡಿಯೋ ಕಳಿಸುತ್ತಿದ್ದ ‘ದೇಶದ್ರೋಹಿ’!

masthmagaa.com:

ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್​ಐ ಜೊತೆ ಲಿಂಕ್​ ಹೊಂದಿದ್ದ ಆರೋಪದಲ್ಲಿ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಜಿತೇಂದ್ರ ಸಿಂಗ್​​ನನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ವಿರುದ್ಧ ದಾಖಲಾಗಿರೋ ಎಫ್​ಐಆರ್​ನಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ಈತ ವಾಟ್ಸಾಪ್​​ನಲ್ಲಿ ಕರಾಚಿಯ ಐಎಸ್​ಐ ಏಜೆಂಟ್​ ಜೊತೆ ಚಾಟ್​ ಮಾಡ್ತಿದ್ದ. ಫೋಟೋ, ವಿಡಿಯೋ, ಆಡಿಯೋಗಳನ್ನ ಶೇರ್ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಐಎಸ್​​ಐ ಏಜೆಂಟ್​ ತನ್ನನ್ನ ತಾನು ಪೂಜಾ ಅಂತ ಪರಿಸಿಕೊಂಡಿದ್ದಳು. 72ರಿಂದ ಆರಂಭವಾಗಿ ಎಂಡ್​ನಲ್ಲಿ 87 ನಂಬರ್ ಇದ್ದ ಮೊಬೈಲ್​​ ನಂಬರ್ ಮೂಲಕ ಕಾಂಟ್ಯಾಕ್ಟ್ ಇತ್ತು. ಈ ನಂಬರ್ ಅನ್ನ ‘ಪೂಜಾ ಜೀ’ ಅಂತ ನಂಬರ್​ ಸೇವ್​ ಮಾಡಿದ್ದ. ಈತನ ನಂಬರ್ 95ರಿಂದ ಆರಂಭವಾಗಿ 84ನಲ್ಲಿ ಅಂತ್ಯವಾಗಿತ್ತು ಅನ್ನೋದು ಗೊತ್ತಾಗಿದೆ. ಈತನ ಬಳಿಯಿದ್ದ ಮೊಬೈಲ್, ಸಿಮ್, ಮಿಲಿಟರಿ ಸಮವಸ್ತ್ರವನ್ನ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ಕಾಟನ್​ ಪೇಟೆ ಬಳಿಯ ಜಾಲಿ ಮೊಹಲ್ಲಾದಲ್ಲಿ ನಾಲ್ವರ ಜೊತೆ ವಾಸವಿದ್ದ ಈತನನ್ನ ನಿನ್ನೆ ಸೇನಾ ಗುಪ್ತಚರ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಬಟ್ಟೆ ವ್ಯಾಪಾರಿ ಅಂತ ಹೇಳಿಕೊಂಡಿದ್ದ ಈ ಜಿತೇಂದ್ರ ಸಿಂಗ್ ಪಾಕಿಸ್ತಾನದ ಏಜೆಂಟ್ಗೆ ಭಾರತೀಯ ಸೇನೆ, ಭದ್ರತೆ, ರಕ್ಷಣೆಗೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನ ಕಳಿಸಿದ್ದ.

-masthmagaa.com

Contact Us for Advertisement

Leave a Reply