masthmagaa.com:
ರಾಜ್ಯದಲ್ಲಿ ಕೊರೋನಾ ದಾಖಲೆ ಬರೆದಿದೆ. ಇವತ್ತು ಒಂದೇ ದಿನ 50,210 ಮಂದಿಗೆ ಕೊರೋನಾ ಬಂದಿದೆ. ರಾಜ್ಯದಲ್ಲಿ ಕೊರೋನಾ ಹಾವಳಿ ಶುರುವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟು ಮಂದಿಗೆ ಕೊರೋನಾ ಸೋಂಕು ಬಂದಿದೆ. ಈ ಹಿಂದೆ ಅಂದ್ರೆ ಕಳೆದ ಅಲೆಯಲ್ಲಿ ಅತಿ ಹೆಚ್ಚು ಅಂದ್ರೆ, ಮೇ 5ರಂದು 50,112 ಮಂದಿಗೆ ಕೊರೋನಾ ಬಂದಿತ್ತು..ಅದಾದ ಬಳಿಕ 2ನೇ ಅಲೆಯ ಕೊರೋನಾ ಹಾವಳಿ ಇಳಿಮುಖವಾಗಿ ಸಾಗಿತ್ತು. ಆದ್ರೆ ಈ ಸಲ ಇನ್ನೂ ಇಳಿಮುಖವಾಗಿಲ್ಲ.. ಆದ್ರೆ ಸಾವಿನ ಪ್ರಮಾಣ 2ನೇ ಅಲೆಗಿಂತ ಕಡಿಮೆ ಇದೆ. ಈ ಹಿಂದೆ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದ ಮೇ 5ರಂದು ಸಾವಿನ ಸಂಖ್ಯೆ 346 ಇತ್ತು. ಆದ್ರೆ ಇವತ್ತು ಸಾವಿನ ಸಂಖ್ಯೆ 19 ಮಾತ್ರ ಇದೆ. ಆದ್ರೂ ಕೂಡ ರಾಜ್ಯದಲ್ಲಿ ಇತ್ತೀಚೆಗೆ ಶೀತ, ಜ್ವರ, ಕೆಮ್ಮಿನಂತ ಪ್ರಕರಣಗಳು ಜಾಸ್ತಿಯಾಗ್ತಿವೆ. ಕ್ಲೀನಿಕ್ಗಳು, ಮೆಡಿಕಲ್ಗಳ ಮುಂದೆ ಜನ ಕ್ಯೂ ನಿಲ್ತಿದ್ದಾರೆ. ಅಂದಹಾಗೆ ಇವತ್ತಿನ ಪ್ರಕರಣಗಳ ಪೈಕಿ 26,299 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಪಾಸಿಟಿವಿಟಿ ದರ 22.77 ಪರ್ಸೆಂಟ್ನಷ್ಟಿದೆ.
-masthmagaa.com
Contact Us for Advertisement