ರಾಜ್ಯದಲ್ಲಿ ಹೊಸ ದಾಖಲೆ ಬರೆದ ಕೊರೋನಾ!

masthmagaa.com:

ರಾಜ್ಯದಲ್ಲಿ ಕೊರೋನಾ ದಾಖಲೆ ಬರೆದಿದೆ. ಇವತ್ತು ಒಂದೇ ದಿನ 50,210 ಮಂದಿಗೆ ಕೊರೋನಾ ಬಂದಿದೆ. ರಾಜ್ಯದಲ್ಲಿ ಕೊರೋನಾ ಹಾವಳಿ ಶುರುವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟು ಮಂದಿಗೆ ಕೊರೋನಾ ಸೋಂಕು ಬಂದಿದೆ. ಈ ಹಿಂದೆ ಅಂದ್ರೆ ಕಳೆದ ಅಲೆಯಲ್ಲಿ ಅತಿ ಹೆಚ್ಚು ಅಂದ್ರೆ, ಮೇ 5ರಂದು 50,112 ಮಂದಿಗೆ ಕೊರೋನಾ ಬಂದಿತ್ತು..ಅದಾದ ಬಳಿಕ 2ನೇ ಅಲೆಯ ಕೊರೋನಾ ಹಾವಳಿ ಇಳಿಮುಖವಾಗಿ ಸಾಗಿತ್ತು. ಆದ್ರೆ ಈ ಸಲ ಇನ್ನೂ ಇಳಿಮುಖವಾಗಿಲ್ಲ.. ಆದ್ರೆ ಸಾವಿನ ಪ್ರಮಾಣ 2ನೇ ಅಲೆಗಿಂತ ಕಡಿಮೆ ಇದೆ. ಈ ಹಿಂದೆ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದ ಮೇ 5ರಂದು ಸಾವಿನ ಸಂಖ್ಯೆ 346 ಇತ್ತು. ಆದ್ರೆ ಇವತ್ತು ಸಾವಿನ ಸಂಖ್ಯೆ 19 ಮಾತ್ರ ಇದೆ. ಆದ್ರೂ ಕೂಡ ರಾಜ್ಯದಲ್ಲಿ ಇತ್ತೀಚೆಗೆ ಶೀತ, ಜ್ವರ, ಕೆಮ್ಮಿನಂತ ಪ್ರಕರಣಗಳು ಜಾಸ್ತಿಯಾಗ್ತಿವೆ. ಕ್ಲೀನಿಕ್​ಗಳು, ಮೆಡಿಕಲ್​​ಗಳ ಮುಂದೆ ಜನ ಕ್ಯೂ ನಿಲ್ತಿದ್ದಾರೆ. ಅಂದಹಾಗೆ ಇವತ್ತಿನ ಪ್ರಕರಣಗಳ ಪೈಕಿ 26,299 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಪಾಸಿಟಿವಿಟಿ ದರ 22.77 ಪರ್ಸೆಂಟ್​​ನಷ್ಟಿದೆ.

-masthmagaa.com

Contact Us for Advertisement

Leave a Reply