masthmagaa.com:
ಯುಕ್ರೇನ್ನಲ್ಲಿ ರಷ್ಯಾ ಸೇನೆ ಮತ್ತು ಯುಕ್ರೇನ್ ಸೇನೆ ಮಧ್ಯ ಭೀಕರ ಯುದ್ಧ ನಡೀತಿದೆ. ವಿಶೇಷ ಸೇನಾ ಕಾರ್ಯಾಚರಣೆ ಹೆಸರಲ್ಲಿ ಯುಕ್ರೇನ್ನ ವಾಯುನೆಲೆ, ಮಿಲಿಟರಿ ಮೂಲಸೌಕರ್ಯ, ಶಸ್ತ್ರಾಗಾರ, ಸರ್ಕಾರಿ ಕಟ್ಟಡಗಳನ್ನ ಗುರಿಯಾಗಿಸಿ ರಷ್ಯಾ ನಡೆಸ್ತಿರೋ ದಾಳಿಗೆ ಯುಕ್ರೇನ್ನ ಹಲವು ನಗರಗಳು ಹೊತ್ತಿ ಉರೀತಿವೆ. ರಷ್ಯಾದ ಯುದ್ಧ ಟ್ಯಾಂಕ್, ಮಿಲಿಟರಿ ಟ್ರಕ್, ಯುದ್ಧ ವಿಮಾನ, ಹೆಲಿಕಾಪ್ಟರ್ಗಳು ಯುಕ್ರೇನ್ನಲ್ಲಿ ರಾಜಾರೋಷವಾಗಿ ಓಡಾಡ್ತಿವೆ. ಟಾರ್ಗೆಟ್ಗಳನ್ನ ಗುರಿ ಇಟ್ಟು ಕ್ಷಿಪಣಿಗಳಿಂದ ದಾಳಿ ಮಾಡ್ತಿದೆ. ಕಟ್ಟಡಗಳಿಂದ ದಟ್ಟ ಹೊಗೆ ಆಕಾಶಕ್ಕೆ ಚಿಮ್ಮಿದೆ. ಯುಕ್ರೇನ್ ರಾಜಧಾನಿ ಕಿಯವ್ ಹಾಗೂ ಪೂರ್ವದಲ್ಲಿ ಬರೋ ಇತರ ನಗರಗಳಾದ ಖಾರ್ಕಿವ್, ಮರಿಯೊಪೋಲ್, ಒಡೆಸ್ಸಾ ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ರಷ್ಯಾ ಇತ್ತೀಚೆಗೆ ಸ್ವತಂತ್ರ ಅಂತ ಘೋಷಿಸಿದ್ದ ಪೂರ್ವ ಯುಕ್ರೇನ್ ಲುಹಾನ್ಸ್ಕ್ ಮತ್ತು ಡಾನೆಟ್ಸ್ಕ್ನ ಕೆಲವೊಂದು ಪ್ರದೇಶಗಳನ್ನ ರಷ್ಯಾ ಸೇನೆ ವಶಪಡಿಸಿಕೊಂಡಿದೆ. ಅವುಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿದೆ ಅಂತ ವರದಿಯಾಗಿದೆ. ಅದ್ರಲ್ಲೂ ಲುಹಾನ್ಸ್ಕ್ನ ಹಲವು ಪ್ರದೇಶಗಳು ಯುಕ್ರೇನ್ ನಿಯಂತ್ರಣ ತಪ್ಪಿ ಈಗ ರಷ್ಯಾ ಕೈಗೆ ಹೋಗಿದೆ. ಉಳಿದಕಡೆ ಯುಕ್ರೇನ್ ಸೇನೆ ರಷ್ಯಾ ಸೇನೆಗೆ ತೀವ್ರ ಪ್ರತಿರೋಧವೊಡ್ಡುತ್ತಿದೆ ಅಂತ ಯುಕ್ರೇನ್ ಸಂಸದೆ ಮರಿಯಾ ಲೊನೊವಾ ಮಾಹಿತಿ ಕೊಟ್ಟಿದ್ದಾರೆ. ಜೊತೆಗೆ ಯುಕ್ರೇನ್ ಆಕಾಶದಲ್ಲಿ ರಷ್ಯಾದ ಆರು ಹೆಲಿಕಾಪ್ಟರ್ಗಳು ಹಾರಾಟ ನಡೆಸಿರೋ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮರಿಯಾ ಲೊನೊವಾ, ರಷ್ಯಾ ಸೇನೆಯು ರಾಜಧಾನಿ ಕಿಯವ್ ಸಮೀಪದ ಒಂದು ಏರ್ಬೇಸ್ ಅನ್ನ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟಿದೆ. ಆ ಏರ್ಬೇಸ್ ಅನ್ನ ರಷ್ಯಾ ಈಗ ತನ್ನ ಕಾರ್ಯಾಚರಣೆಗೆ ಬಳಸಿಕೊಳ್ಳಬಹದು ಅನ್ನೋ ಆತಂಕವನ್ನ ಅವರು ಹೊರಹಾಕಿದ್ದಾರೆ. ಸೋ ಯುಕ್ರೇನ್ನ ಏರ್ ಡಿಫೆನ್ಸ್ ಸಿಸ್ಟಂ ಸಂಪೂರ್ಣ ವಿಫಲವಾಯ್ತಾ, ಯುಕ್ರೇನ್ ವಾಯು ಪ್ರದೇಶ ಮತ್ತು ವಾಯುನೆಲೆಗಳ ಮೇಲೆ ರಷ್ಯಾ ಸಂಪೂರ್ಣ ನಿಯಂತ್ರಣ ಸಾಧಿಸಿಬಿಡ್ತಾ ಅನ್ನೋ ಅನುಮಾನ ಮೂಡಿದೆ. ಲುಹಾನ್ಸ್ಕ್ನ ಎರಡು ಪಟ್ಟಣಗಳ ಮೇಲೆ ತಾವು ನಿಯಂತ್ರಣ ಸಾಧಿಸಿದ್ದೀವಿ ಅಂತ ಅಲ್ಲಿನ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಹೇಳಿದ್ದಾರೆ.
ಆದ್ರೆ ಯುಕ್ರೇನ್ ಮಾತ್ರ ನಾವು ರಷ್ಯಾದ ಯುದ್ಧ ವಿಮಾನ, ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಸೇನಾ ಟ್ರಕ್ಗಳನ್ನ ಹೊಡೆದುರುಳಿಸಿದ್ದೀವಿ ಅಂತ ಹೇಳಿಕೊಂಡಿದೆ. ಇದುವರೆಗೆ ರಷ್ಯಾದ ಆರು ಯುದ್ಧ ವಿಮಾನ, ಒಂದು ಹೆಲಿಕಾಪ್ಟರ್, ನಾಲ್ಕು ಟ್ಯಾಂಕ್ ಮತ್ತು ಹಲವು ಟ್ರಕ್ಗಳನ್ನ ಹೊಡೆದುರುಳಿಸಿದ್ದೇವೆ. ಜೊತೆಗೆ ಪೂರ್ವ ಯುಕ್ರೇನ್ ಭಾಗದಲ್ಲಿ ರಷ್ಯಾದ 50 ಯೋಧರನ್ನ ಫಿನಿಶ್ ಮಾಡಿದ್ದೀವಿ. ಅವರ ನಿಯಂತ್ರಣದಲ್ಲಿದ್ದ ಲುಹಾನ್ಸ್ಕ್ನ ಶಸ್ತಿಯಾ (Schastia) ಅನ್ನೋ ಪ್ರದೇಶವನ್ನ ವಾಪಸ್ ನಮ್ಮ ಕಂಟ್ರೋಲ್ಗೆ ಪಡೆದುಕೊಂಡಿದ್ದೀವಿ. ನಮ್ಮಕಡೆನೂ 40 ಸಾವು ಸಂಭವಿಸಿದೆ ಅಂತ ಯುಕ್ರೇನ್ ಹೇಳಿದೆ. ಆದ್ರೆ ಇದ್ಯಾವುದನ್ನೂ ರಷ್ಯಾ ಇನ್ನೂ ಕನ್ಫರ್ಮ್ ಮಾಡಿಲ್ಲ. ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಬಂದಿರೋ ವಿಡಿಯೋಗಳನ್ನ ನೋಡಿದ್ರೆ ಯುಕ್ರೇನಿಗೇನೇ ಹೆಚ್ಚು ಹಾನಿಯಾಗಿರೋದು ಮೇಲ್ನೋಟಕ್ಕೆ ಕಂಡುಬರುತ್ತೆ.
ಈ ಬಗ್ಗೆ ಅಪ್ಡೇಟ್ಸ್ ಬರ್ತಾನೇ ಇವೆ, ಈಗ ಬಂದಿರೋ ಮಾಹಿತಿ ಪ್ರಕಾರ, 14 ಜನರಿದ್ದ ಯುಕ್ರೇನ್ ಸೇನಾ ವಿಮಾನ ರಾಜಧಾನಿ ಕಿಯವ್ ಸಮೀಪ ಕ್ರಾಶ್ ಆಗಿದೆ ಅಂತೆ. ದಾಳಿ ಮಾಡೋಕೆ ಕಾಲಿ ಅದೇಥರ ರಷ್ಯಾದ ಎರಡು ಹಡಗುಗಳ ಮೇಲೂ ಯುಕ್ರೇನ್ ದಾಳಿ ಮಾಡಿದೆ ಅಂತ ವರದಿಯಾಗಿದೆ.
ಹಾಗಿದ್ರೆ ಬಲಿಷ್ಠ ರಷ್ಯಾ ಸೇನೆ ಎದುರು ಯುಕ್ರೇನ್ ಸೇನೆ ಇಷ್ಟೊತಂಕ ಹೇಗೆ ನಿಂತಿದೆ ಅನ್ನೋ ಪ್ರಶ್ನೆಯೂ ಮೂಡುತ್ತೆ. ಯುಕ್ರೇನ್ ಬಳಿ ದೊಡ್ಡ ಸಂಖ್ಯೆಯ ಯೋಧರು ಇಲ್ಲ. ಹೀಗಾಗಿ ದೇಶದ ಜನತೆಯನ್ನೇ ಯೋಧರನ್ನಾಗಿ ಪರಿವರ್ತಿಸಲು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಾಗಿದ್ದಾರೆ. ರಷ್ಯಾ ಆಕ್ರಮಣದಿಂದ ಯುಕ್ರೇನ್ ಅನ್ನ ರಕ್ಷಿಸೋಕೆ ಯಾರೆಲ್ಲಾ ರೆಡಿ ಇದ್ದೀರೋ ಅವರೆಲ್ಲಾ ಮುಂದೆ ಬರಬೇಕು. ಅವರಿಗೆ ನಾವು ಶಸ್ತ್ರಾಸ್ತ್ರಗಳನ್ನ ಕೊಡೋದಾಗಿ ಹೇಳಿದ್ದಾರೆ. ಅಲ್ಲದೆ ಎದುರಾಳಿಗಳಿಗೆ ಗರಿಷ್ಠ ಪ್ರಮಾಣದ ನಷ್ಟ ಉಂಟುಮಾಡುವಂತೆ ಯುಕ್ರೇನ್ ಸೇನೆಗೆ ಝೆಲೆನ್ಸ್ಕಿ ಆದೇಶಿಸಿದ್ದಾರೆ ಸೇನಾಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ದಾಳಿ ಬೆನ್ನಲ್ಲೇ ರಷ್ಯಾ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನ ಯುಕ್ರೇನ್ ಸಂಪೂರ್ಣವಾಗಿ ಕಟ್ ಮಾಡ್ಕೊಂಡಿದೆ. ಯುಕ್ರೇನ್ನಲ್ಲಿದ್ದ ಡೆನ್ಮಾರ್ಕ್ ರಾಯಭಾರ ಕಚೇರಿ ಸೇರಿದಂತೆ ವಿವಿಧ ದೇಶಗಳ ರಾಯಭಾರ ಕಚೇರಿಗಳು ಬಂದ್ ಆಗಿವೆ.
-masthmagaa.com
Contact Us for Advertisement