ಯುಕ್ರೇನ್‌ ರಷ್ಯಾ ಮಧ್ಯೆ ಭೀಕರ ಯುದ್ಧ!

masthmagaa.com:

ಯುಕ್ರೇನ್​ನಲ್ಲಿ ರಷ್ಯಾ ಸೇನೆ ಮತ್ತು ಯುಕ್ರೇನ್ ಸೇನೆ ಮಧ್ಯ ಭೀಕರ ಯುದ್ಧ ನಡೀತಿದೆ. ವಿಶೇಷ ಸೇನಾ ಕಾರ್ಯಾಚರಣೆ ಹೆಸರಲ್ಲಿ ಯುಕ್ರೇನ್​ನ​ ವಾಯುನೆಲೆ, ಮಿಲಿಟರಿ ಮೂಲಸೌಕರ್ಯ, ಶಸ್ತ್ರಾಗಾರ, ಸರ್ಕಾರಿ ಕಟ್ಟಡಗಳನ್ನ ಗುರಿಯಾಗಿಸಿ ರಷ್ಯಾ ನಡೆಸ್ತಿರೋ ದಾಳಿಗೆ ಯುಕ್ರೇನ್​ನ ಹಲವು ನಗರಗಳು ಹೊತ್ತಿ ಉರೀತಿವೆ. ರಷ್ಯಾದ ಯುದ್ಧ ಟ್ಯಾಂಕ್​, ಮಿಲಿಟರಿ ಟ್ರಕ್​, ಯುದ್ಧ ವಿಮಾನ, ಹೆಲಿಕಾಪ್ಟರ್​ಗಳು ಯುಕ್ರೇನ್​ನಲ್ಲಿ ರಾಜಾರೋಷವಾಗಿ ಓಡಾಡ್ತಿವೆ. ಟಾರ್ಗೆಟ್​​ಗಳನ್ನ ಗುರಿ ಇಟ್ಟು ಕ್ಷಿಪಣಿಗಳಿಂದ ದಾಳಿ ಮಾಡ್ತಿದೆ. ಕಟ್ಟಡಗಳಿಂದ ದಟ್ಟ ಹೊಗೆ ಆಕಾಶಕ್ಕೆ ಚಿಮ್ಮಿದೆ. ಯುಕ್ರೇನ್​ ರಾಜಧಾನಿ ಕಿಯವ್​ ಹಾಗೂ ಪೂರ್ವದಲ್ಲಿ ಬರೋ ಇತರ ನಗರಗಳಾದ ಖಾರ್ಕಿವ್​, ಮರಿಯೊಪೋಲ್​, ಒಡೆಸ್ಸಾ ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ರಷ್ಯಾ ಇತ್ತೀಚೆಗೆ ಸ್ವತಂತ್ರ ಅಂತ ಘೋಷಿಸಿದ್ದ ಪೂರ್ವ ಯುಕ್ರೇನ್​​ ಲುಹಾನ್ಸ್ಕ್​ ಮತ್ತು ಡಾನೆಟ್ಸ್ಕ್​​ನ ಕೆಲವೊಂದು ಪ್ರದೇಶಗಳನ್ನ ರಷ್ಯಾ ಸೇನೆ ವಶಪಡಿಸಿಕೊಂಡಿದೆ. ಅವುಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿದೆ ಅಂತ ವರದಿಯಾಗಿದೆ. ಅದ್ರಲ್ಲೂ ಲುಹಾನ್ಸ್ಕ್​ನ ಹಲವು ಪ್ರದೇಶಗಳು ಯುಕ್ರೇನ್​ ನಿಯಂತ್ರಣ ತಪ್ಪಿ ಈಗ ರಷ್ಯಾ ಕೈಗೆ ಹೋಗಿದೆ. ಉಳಿದಕಡೆ ಯುಕ್ರೇನ್​ ಸೇನೆ ರಷ್ಯಾ ಸೇನೆಗೆ ತೀವ್ರ ಪ್ರತಿರೋಧವೊಡ್ಡುತ್ತಿದೆ ಅಂತ ಯುಕ್ರೇನ್ ಸಂಸದೆ ಮರಿಯಾ ಲೊನೊವಾ ಮಾಹಿತಿ ಕೊಟ್ಟಿದ್ದಾರೆ. ಜೊತೆಗೆ ಯುಕ್ರೇನ್​ ಆಕಾಶದಲ್ಲಿ ರಷ್ಯಾದ ಆರು ಹೆಲಿಕಾಪ್ಟರ್​ಗಳು ಹಾರಾಟ ನಡೆಸಿರೋ ವಿಡಿಯೋ ವೈರಲ್​ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮರಿಯಾ ಲೊನೊವಾ, ರಷ್ಯಾ ಸೇನೆಯು ರಾಜಧಾನಿ ಕಿಯವ್ ಸಮೀಪದ ಒಂದು ಏರ್​ಬೇಸ್​​ ಅನ್ನ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟಿದೆ. ಆ ಏರ್​ಬೇಸ್​​ ಅನ್ನ ರಷ್ಯಾ ಈಗ ತನ್ನ ಕಾರ್ಯಾಚರಣೆಗೆ ಬಳಸಿಕೊಳ್ಳಬಹದು ಅನ್ನೋ ಆತಂಕವನ್ನ ಅವರು ಹೊರಹಾಕಿದ್ದಾರೆ. ಸೋ ಯುಕ್ರೇನ್​ನ ಏರ್ ಡಿಫೆನ್ಸ್ ಸಿಸ್ಟಂ ಸಂಪೂರ್ಣ ವಿಫಲವಾಯ್ತಾ, ಯುಕ್ರೇನ್ ವಾಯು ಪ್ರದೇಶ ಮತ್ತು ವಾಯುನೆಲೆಗಳ ಮೇಲೆ ರಷ್ಯಾ ಸಂಪೂರ್ಣ ನಿಯಂತ್ರಣ ಸಾಧಿಸಿಬಿಡ್ತಾ ಅನ್ನೋ ಅನುಮಾನ ಮೂಡಿದೆ. ಲುಹಾನ್ಸ್ಕ್​ನ ಎರಡು ಪಟ್ಟಣಗಳ ಮೇಲೆ ತಾವು ನಿಯಂತ್ರಣ ಸಾಧಿಸಿದ್ದೀವಿ ಅಂತ ಅಲ್ಲಿನ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಹೇಳಿದ್ದಾರೆ.

ಆದ್ರೆ ಯುಕ್ರೇನ್​ ಮಾತ್ರ ನಾವು ರಷ್ಯಾದ ಯುದ್ಧ ವಿಮಾನ, ಹೆಲಿಕಾಪ್ಟರ್​, ಟ್ಯಾಂಕ್​ ಮತ್ತು ಸೇನಾ ಟ್ರಕ್​ಗಳನ್ನ ಹೊಡೆದುರುಳಿಸಿದ್ದೀವಿ ಅಂತ​​ ಹೇಳಿಕೊಂಡಿದೆ. ಇದುವರೆಗೆ ರಷ್ಯಾದ ಆರು ಯುದ್ಧ ವಿಮಾನ, ಒಂದು ಹೆಲಿಕಾಪ್ಟರ್, ನಾಲ್ಕು ಟ್ಯಾಂಕ್ ಮತ್ತು ಹಲವು ಟ್ರಕ್​​​ಗಳನ್ನ ಹೊಡೆದುರುಳಿಸಿದ್ದೇವೆ. ಜೊತೆಗೆ ಪೂರ್ವ ಯುಕ್ರೇನ್​ ಭಾಗದಲ್ಲಿ ರಷ್ಯಾದ 50 ಯೋಧರನ್ನ ಫಿನಿಶ್​ ಮಾಡಿದ್ದೀವಿ. ಅವರ ನಿಯಂತ್ರಣದಲ್ಲಿದ್ದ ಲುಹಾನ್ಸ್ಕ್​ನ ಶಸ್ತಿಯಾ (Schastia) ಅನ್ನೋ ಪ್ರದೇಶವನ್ನ ವಾಪಸ್​ ನಮ್ಮ ಕಂಟ್ರೋಲ್​​ಗೆ ಪಡೆದುಕೊಂಡಿದ್ದೀವಿ. ನಮ್ಮಕಡೆನೂ 40 ಸಾವು ಸಂಭವಿಸಿದೆ ಅಂತ ಯುಕ್ರೇನ್​ ಹೇಳಿದೆ. ಆದ್ರೆ ಇದ್ಯಾವುದನ್ನೂ ರಷ್ಯಾ ಇನ್ನೂ ಕನ್ಫರ್ಮ್​ ಮಾಡಿಲ್ಲ. ಮಾಧ್ಯಮಗಳಲ್ಲಿ, ಸೋಷಿಯಲ್​ ಮೀಡಿಯಾಗಳಲ್ಲಿ ಬಂದಿರೋ ವಿಡಿಯೋಗಳನ್ನ ನೋಡಿದ್ರೆ ಯುಕ್ರೇನಿ​ಗೇನೇ ಹೆಚ್ಚು ಹಾನಿಯಾಗಿರೋದು ಮೇಲ್ನೋಟಕ್ಕೆ ಕಂಡುಬರುತ್ತೆ.

ಈ ಬಗ್ಗೆ ಅಪ್ಡೇಟ್ಸ್ ಬರ್ತಾನೇ ಇವೆ, ಈಗ ಬಂದಿರೋ ಮಾಹಿತಿ ಪ್ರಕಾರ, 14 ಜನರಿದ್ದ ಯುಕ್ರೇನ್​ ಸೇನಾ ವಿಮಾನ ರಾಜಧಾನಿ ಕಿಯವ್​ ಸಮೀಪ ಕ್ರಾಶ್​ ಆಗಿದೆ ಅಂತೆ. ದಾಳಿ ಮಾಡೋಕೆ ಕಾಲಿ ಅದೇಥರ ರಷ್ಯಾದ ಎರಡು ಹಡಗುಗಳ ಮೇಲೂ ಯುಕ್ರೇನ್ ದಾಳಿ ಮಾಡಿದೆ ಅಂತ ವರದಿಯಾಗಿದೆ.

ಹಾಗಿದ್ರೆ ಬಲಿಷ್ಠ ರಷ್ಯಾ ಸೇನೆ ಎದುರು ಯುಕ್ರೇನ್ ಸೇನೆ​ ಇಷ್ಟೊತಂಕ ಹೇಗೆ ನಿಂತಿದೆ ಅನ್ನೋ ಪ್ರಶ್ನೆಯೂ ಮೂಡುತ್ತೆ. ಯುಕ್ರೇನ್ ಬಳಿ ದೊಡ್ಡ ಸಂಖ್ಯೆಯ ಯೋಧರು ಇಲ್ಲ. ಹೀಗಾಗಿ ದೇಶದ ಜನತೆಯನ್ನೇ ಯೋಧರನ್ನಾಗಿ ಪರಿವರ್ತಿಸಲು ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್​ಕಿ ಮುಂದಾಗಿದ್ದಾರೆ. ರಷ್ಯಾ ಆಕ್ರಮಣದಿಂದ ಯುಕ್ರೇನ್​ ಅನ್ನ ರಕ್ಷಿಸೋಕೆ ಯಾರೆಲ್ಲಾ ರೆಡಿ ಇದ್ದೀರೋ ಅವರೆಲ್ಲಾ ಮುಂದೆ ಬರಬೇಕು. ಅವರಿಗೆ ನಾವು ಶಸ್ತ್ರಾಸ್ತ್ರಗಳನ್ನ ಕೊಡೋದಾಗಿ ಹೇಳಿದ್ದಾರೆ. ಅಲ್ಲದೆ ಎದುರಾಳಿಗಳಿಗೆ ಗರಿಷ್ಠ ಪ್ರಮಾಣದ ನಷ್ಟ ಉಂಟುಮಾಡುವಂತೆ ಯುಕ್ರೇನ್​ ಸೇನೆಗೆ ಝೆಲೆನ್ಸ್​ಕಿ ಆದೇಶಿಸಿದ್ದಾರೆ ಸೇನಾಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ದಾಳಿ ಬೆನ್ನಲ್ಲೇ ರಷ್ಯಾ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನ ಯುಕ್ರೇನ್ ಸಂಪೂರ್ಣವಾಗಿ ಕಟ್ ಮಾಡ್ಕೊಂಡಿದೆ. ಯುಕ್ರೇನ್​ನಲ್ಲಿದ್ದ ಡೆನ್ಮಾರ್ಕ್​ ರಾಯಭಾರ ಕಚೇರಿ ಸೇರಿದಂತೆ ವಿವಿಧ ದೇಶಗಳ ರಾಯಭಾರ ಕಚೇರಿಗಳು ಬಂದ್​ ಆಗಿವೆ.

-masthmagaa.com

Contact Us for Advertisement

Leave a Reply