masthmagaa.com:
16 ವರ್ಷದ ಹುಡುಗನೊಬ್ಬ ಪಬ್ಜಿ ಆಡಲು ಬಿಟ್ಟಿಲ್ಲ, ಬೈತಾರೆ ಅಂತ ಹೆತ್ತ ತಾಯಿಯನ್ನೆ ಶೂಟ್ ಮಾಡಿ ಸಾಯಿಸಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ತಾಯಿಯನ್ನ ಕೊಂದ ಬಳಿಕ ಮೃತದೇಹವನ್ನ ರೂಮ್ನಲ್ಲಿ ಬಚ್ಚಿಟ್ಟಿದ್ದ. ಮೃತದೇಹ ಕೊಳೆತು ಸ್ಮೆಲ್ ಬರಬಾರ್ದು ಅಂತ ರೂಮ್ ತುಂಬಾ ಏರ್ ಫ್ರೆಶ್ನರ್ ಸಿಂಪಡಿಸಿದ್ದ. ಇದೆಲ್ಲವನ್ನ ನೋಡಿದ್ದ 9 ವರ್ಷದ ತನ್ನ ತಂಗಿಯನ್ನ ಕೂಡ ಅದೇ ಕೋಣೆಯಲ್ಲಿ ಕೂಡಿ ಹಾಕಿದ್ದ. ಅಂದ್ಹಾಗೆ ಈತನ ತಂದೆ ಸೇನೆಯಲ್ಲಿದ್ದು, ಪಶ್ಚಿಮ ಬಂಗಾಳದಲ್ಲಿ ಸೇವೆಗೆ ನಿಯೋಜನೆಗೊಂಡಿದ್ರು. ಅವರು ಮನೆಯಲ್ಲಿಟ್ಟಿದ್ದ ಗನ್ ಬಳಸಿಯೇ ತಾಯಿಯನ್ನ ಸಾಯಿಸಿದ್ದಾನೆ. ಎರಡು ದಿನದ ಬಳಿಕ ಮೃತದೇಹದ ವಾಸನೆ ಜೋರಾಗಿ ಬರೋಕೆ ಶುರುವಾದ ಹಿನ್ನೆಲೆ ಹೆದರಿ ತಂದೆಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ತಂದೆ ಅಕ್ಕಪಕ್ಕದ ಮನೆಯವರಿಗೆ ಕಾಲ್ ಮಾಡಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಆರಂಭದಲ್ಲಿ ಯಾವುದೋ ಎಲೆಕ್ಟ್ರಿಶಿಯನ್ ಹತ್ಯೆ ಮಾಡಿದ್ದು ಅಂತ ಬಾಲಕ ನಾಟಕ ಆಡಿದ್ರೂ ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
-masthmagaa.com
Contact Us for Advertisement