ಪಬ್ಜಿ ಆಡಲು ಬಿಡದ ತಾಯಿಗೆ ಈತ ಮಾಡಿದ್ದೇನು ಗೊತ್ತಾ?

masthmagaa.com:

16 ವರ್ಷದ ಹುಡುಗನೊಬ್ಬ ಪಬ್‌ಜಿ ಆಡಲು ಬಿಟ್ಟಿಲ್ಲ, ಬೈತಾರೆ ಅಂತ ಹೆತ್ತ ತಾಯಿಯನ್ನೆ ಶೂಟ್‌ ಮಾಡಿ ಸಾಯಿಸಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ತಾಯಿಯನ್ನ ಕೊಂದ ಬಳಿಕ ಮೃತದೇಹವನ್ನ ರೂಮ್​​ನಲ್ಲಿ ಬಚ್ಚಿಟ್ಟಿದ್ದ. ಮೃತದೇಹ ಕೊಳೆತು ಸ್ಮೆಲ್​ ಬರಬಾರ್ದು ಅಂತ ರೂಮ್​ ತುಂಬಾ ಏರ್​ ಫ್ರೆಶ್​ನರ್​ ಸಿಂಪಡಿಸಿದ್ದ. ಇದೆಲ್ಲವನ್ನ ನೋಡಿದ್ದ 9 ವರ್ಷದ ತನ್ನ ತಂಗಿಯನ್ನ ಕೂಡ ಅದೇ ಕೋಣೆಯಲ್ಲಿ ಕೂಡಿ ಹಾಕಿದ್ದ. ಅಂದ್ಹಾಗೆ ಈತನ ತಂದೆ ಸೇನೆಯಲ್ಲಿದ್ದು, ಪಶ್ಚಿಮ ಬಂಗಾಳದಲ್ಲಿ ಸೇವೆಗೆ ನಿಯೋಜನೆಗೊಂಡಿದ್ರು. ಅವರು ಮನೆಯಲ್ಲಿಟ್ಟಿದ್ದ ಗನ್​ ಬಳಸಿಯೇ ತಾಯಿಯನ್ನ ಸಾಯಿಸಿದ್ದಾನೆ. ಎರಡು ದಿನದ ಬಳಿಕ ಮೃತದೇಹದ ವಾಸನೆ ಜೋರಾಗಿ ಬರೋಕೆ ಶುರುವಾದ ಹಿನ್ನೆಲೆ ಹೆದರಿ ತಂದೆಗೆ ಕಾಲ್​ ಮಾಡಿ ವಿಷಯ ತಿಳಿಸಿದ್ದಾನೆ. ತಂದೆ ಅಕ್ಕಪಕ್ಕದ ಮನೆಯವರಿಗೆ ಕಾಲ್ ಮಾಡಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಆರಂಭದಲ್ಲಿ ಯಾವುದೋ ಎಲೆಕ್ಟ್ರಿಶಿಯನ್‌ ಹತ್ಯೆ ಮಾಡಿದ್ದು ಅಂತ ಬಾಲಕ ನಾಟಕ ಆಡಿದ್ರೂ ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

-masthmagaa.com

Contact Us for Advertisement

Leave a Reply