100 ಡೈನೋಸರ್​ ಮೊಟ್ಟೆಗಳು ಪತ್ತೆ! ಎಲ್ಲಿ ಗೊತ್ತಾ?

masthmagaa.com:

ಲ್ಯಾಟಿನ್ ಅಮೆರಿಕದ ದೇಶವಾದ ಅರ್ಜೆಂಟೈನಾದಲ್ಲಿ ಡೈನೋಸರ್​​ಗಳ 100 ಮೊಟ್ಟೆ ಪತ್ತೆಯಾಗಿವೆ. ಇವುಗಳ ಒಳಗೆ ಇನ್ನೂ ಕೂಡ ಭ್ರೂಣ ಇದೆ. ಇವುಗಳ ಸ್ಕ್ಯಾನ್ ನಡೆಸಿದಾಗ ಇವೆಲ್ಲವೂ ಒಂದೇ ಪ್ರಬೇಧ ಅಂದ್ರೆ ಮುಸ್ಸಾವ್ರುಸ್​​​ ಪಟಗೊನಿಸಕಸ್​​ಗೆ ಸೇರಿದವು ಅಂತ ಗೊತ್ತಾಗಿದೆ. ಉದ್ದ ಕತ್ತಿನ ಈ ಡೈನೋಸಾರ್​​ಗಳು ಸಸ್ಯಹಾರಿಯಾಗಿದ್ವು. ಈ ಗೂಡು 19.30 ಕೋಟಿ ವರ್ಷಗಳಷ್ಟು ಹಳೆಯದಾಗಿದ್ದು, ಈ ಮೊಟ್ಟೆಗಳಿಂದ ಡೈನೋಸಾರ್​​ಗಳ ಆರಂಭದ ಬಗ್ಗೆ ಮಾಹಿತಿ ಕಲೆ ಹಾಕಲು ಸಾಧ್ಯವಾಗಲಿದೆ ಅಂತ ತಜ್ಞರು ತಿಳಿಸಿದ್ದಾರೆ. ಇದ್ರ ಜೊತೆಗೆ 80 ಮೂಳೆಗಳು ಕೂಡ ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply