ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಆಯ್ಕೆಯಾದ ದ್ರಾವಿಡ್ ಹೇಳಿದ್ದೇನು?

masthmagaa.com:

ಟೀಂ ಇಂಡಿಯಾ ಮಾಜಿ ಆಟಗಾರ, ಗೋಡೆ ಅಂತಲೇ ಫೇಮಸ್ ಆಗಿರೋ ಕನ್ನಡಿಗ ರಾಹುಲ್ ದ್ರಾವಿಡ್​​ ಭಾರತ ತಂಡದ ಹೆಡ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ನವೆಂಬರ್ 17ರಂದು ಶುರುವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಟೂರ್ನಿಯಿಂದ ಚಾರ್ಜ್​ ತಗೊಳ್ಳಲಿದ್ದಾರೆ ಅಂತ ಬಿಸಿಸಿಐ ಖಚಿತಪಡಿಸಿದೆ. ಈ ಟಿ20 ವಿಶ್ವಕಪ್​ ಮುಗಿಯುತ್ತಿದ್ದಂತೆ ಸದ್ಯ ಹೆಡ್​​ಕೋಚ್ ಆಗಿರೋ ರವಿಶಾಸ್ತ್ರಿ ಅಧಿಕಾರಾವಧಿ ಅಂತ್ಯವಾಗಲಿದೆ. ರಾಹುಲ್ ದ್ರಾವಿಡ್ ಈ ಹಿಂದೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ, ಅಂಡರ್​ 19 ತಂಡದ ಕೋಚ್ ಆಗಿ ಕೆಲಸ ಮಾಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಹುಲ್ ದ್ರಾವಿಡ್, ಭಾರತದ ಮುಖ್ಯ ಕೋಚ್ ಆಗಿ ನೇಮಕವಾಗಿರೋದು ಹೆಮ್ಮೆಯ ವಿಚಾರ. ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ತಂಡ ಉತ್ತಮವಾಗಿ ಆಡ್ತಿದೆ. ಅದನ್ನು ಮತ್ತಷ್ಟು ಮುಂದಕ್ಕೆ ತಗೊಂಡು ಹೋಗೋಕೆ ನಾನು ಬಯಸ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply