ಅಮೆರಿಕದ ಸಬ್​ಮರೀನ್ ಡ್ಯಾಮೇಜ್ ಬಗ್ಗೆ ಚೀನಾ ಹೇಳಿದ್ದೇನು..?

masthmagaa.com:

ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಪರಮಾಣು ಸಬ್​ಮರೀನ್ ಡ್ಯಾಮೇಜ್ ಆಗಿದೆ ಅಂತ ನಿನ್ನೆಯಷ್ಟೇ ವರದಿಯಾಗಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿರೋ ಚೀನಾ, ಸಬ್​ಮರೀನ್​ಗೆ ಯಾವ ರೀತಿಯ ಡ್ಯಾಮೇಜ್ ಆಗಿದೆ..? ದಕ್ಷಿಣ ಚೀನಾ ಸಮುದ್ರದ ಯಾವ ಲೊಕೇಷನ್​​ನಲ್ಲಿ ಈ ಘಟನೆ ಸಂಭವಿಸಿದೆ..? ಡ್ಯಾಮೇಜ್ ಆಗಿದ್ರಿಂದ ಪರಮಾಣು ಸೋರಿಕೆಯಾಗಿದ್ಯಾ..? ಹೀಗೆ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಬೇಕು ಅಂತ ಒತ್ತಾಯಿಸಿದೆ. ಜೊತೆಗೆ ಫ್ರೀಡಂ ಆಫ್ ನೇವಿಗೇಷನ್ ಹೆಸರಲ್ಲಿ ಅಮೆರಿಕದ ಯುದ್ಧನೌಕೆಗಳು ಪದೇ ಪದೇ ಇಂಡೋ ಪೆಸಿಫಿಕ್ ವಲಯಕ್ಕೆ ಬರ್ತಿರೋದೇ ಈ ಘಟನೆಗೆ ಮೂಲ ಕಾರಣ ಅಂತ ಆರೋಪಿಸಿದೆ. ಅಂದಹಾಗೆ ಅಕ್ಟೋಬರ್ 2ರಂದು ಯುಎಸ್​ಎಸ್​​​ ಕನೆಕ್ಟಿಕಟ್​​​​​​​​​ ಸಬ್​ಮರೀನ್ ದಕ್ಷಿಣ ಚೀನಾ ಸಾಗರದಲ್ಲಿ ಡ್ಯಾಮೇಜ್ ಆಗಿತ್ತು. ಯಾವ ವಸ್ತುವಿಗೆ ಡಿಕ್ಕಿಯಾಗಿದೆ ಅಂತ ಗೊತ್ತಿಲ್ಲ. ಆದ್ರೆ ಎಲ್ಲರೂ ಕಂಟ್ರೋಲ್​ನಲ್ಲಿದೆ. 11 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಅಷ್ಟೆ ಅಂತ ಅಮೆರಿಕ ತಿಳಿಸಿತ್ತು.

-masthmagaa.com

Contact Us for Advertisement

Leave a Reply