ವಿಶ್ವದ ಮುಂದೆ ಮತ್ತೆ ಪಾಕಿಸ್ತಾನದ ಮಾನ ಹರಾಜು!

masthmagaa.com:

ಪಾಕಿಸ್ತಾನದಲ್ಲಿ ಹಣದುಬ್ಬರ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದ್ದು, ವಿದೇಶಗಳಲ್ಲೂ ಪಾಕ್ ಮಾನ ಹರಾಜಾಗ್ತಿದೆ. ಅದಕ್ಕೆ ಕಾರಣ ಸರ್ಬಿಯಾದಲ್ಲಿರೋ ಪಾಕಿಸ್ತಾನದ ರಾಯಭಾರಿ ಕಚೇರಿ ಮಾಡಿರೋ ಒಂದು ಟ್ವೀಟ್​.. ಬ್ಲೂ ಟಿಕ್ ಇರೋ ಪಾಕ್ ರಾಯಬಾರಿ ಕಚೇರಿಯ ಅಧಿಕೃತ ಖಾತೆ ಇದಾಗಿದೆ. ಇದ್ರಲ್ಲಿ ಪಾಕಿಸ್ತಾನದಲ್ಲಿ ಹಣದುಬ್ಬರ ಹಳೆಯ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಕಳೆದ ಮೂರು ತಿಂಗಳಿಂದ ನಮಗೆ ಸಂಬಳ ಹಾಕಿಲ್ಲ. ಇನ್ನು ಎಷ್ಟು ಸಮಯದವರೆಗೆ ಈ ರೀತಿ ನಿಮಗಾಗಿ ಕೆಲಸ ಮಾಡ್ಬೇಕು ಅಂತ ಬಯಸ್ತೀರಿ ಇಮ್ರಾನ್ ಖಾನ್ ಅವರೇ.. ಶಾಲೆಯಲ್ಲಿ ಫೀಸ್ ಕಟ್ಟಿಲ್ಲ ಅಂತ ಮಕ್ಕಳನ್ನು ಹೊರಹಾಕ್ತಿದ್ದಾರೆ. ಇದೇನಾ ಹೊಸ ಪಾಕಿಸ್ತಾನ..? ಅಂತ ಪ್ರಶ್ನಿಸಲಾಗಿದೆ. ಐಯಮ್ ಸಾರಿ ಇಮ್ರಾನ್ ಖಾನ್​.. ನಮಗೆ ಬೇರೆ ಆಪ್ಶನ್ನೇ ಇಲ್ಲ ಅಂತ ಕೂಡ ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಈ ಟ್ವೀಟ್​​​ಗೆ ಹಲವಾರು ರೀಟ್ವೀಟ್​​ಗಳು ಬಂದಿದ್ದು, ಅಕೌಂಟ್ ಹ್ಯಾಕ್ ಮಾಡಿ ಯಾರೋ ಕಿಡಿಗೇಡಿಗಳು ಈ ಕೆಲ್ಸ ಮಾಡಿರಬಹುದು ಅಂತ ಕೆಲವರು ಹೇಳಿದ್ರೆ, ಇನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಆದ್ರೆ ಪಾಕಿಸ್ತಾನ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

-masthmagaa.com

Contact Us for Advertisement

Leave a Reply