ಕಾಲೆಳೆದ ನೆಟ್ಟಿಗನಿಗೆ ಟ್ವೀಟ್ ಮೂಲಕ ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್!

masthmagaa.com:

ಬಾಲಿವುಡ್ ನಟ ಅಭಿಷೇಕ್‌ ಬಚ್ಚನ್‌ ಸಿನಿಮಾಗಳಿಗಿಂತ ಜಾಸ್ತಿ ಟ್ರೋಲ್‌ ಆಗೋದ್ರಿಂದಾನೆ ಹೆಚ್ಚು ಸುದ್ದಿಯಲ್ಲಿರ್ತಾರೆ. ಅಭಿಷೇಕ್ ತಮ್ಮ ಕೆರಿಯರ್ ಶುರು ಮಾಡಿದ ಟೈಂ ಇಂದಾನೂ ಕೂಡ ಅವರನ್ನ ಟ್ರೊಲ್ ಮಾಡೋರು ಒಬ್ಬರಾ ಇಬ್ಬರಾ? ಎಲ್ಲರೂ ಮಾಡೋರೇ. ಅಮಿತಾಭ ಬಚ್ಚನ್‌ ಮಗ ಅನ್ನೋ ಕಾರಣಕ್ಕೆ ಈತನಿಗೆ ಇಂಡಸ್ಟ್ರಿ ಗೆ ಬರೋಕೆ ಸಾಧ್ಯ ಆಯ್ತು, ಅಮಿತಾಭ್ ಬಚ್ಚನ್ ಪ್ರತಿಭೆ ಮುಂದೆ ಅಭಿಷೇಕ್ ಬಚ್ಚನ್ ನಿಜಕ್ಕೂ ಬಚ್ಚಾನೇ ಎನ್ನುವಂಥ ಮಾತುಗಳನ್ನ ಅಭಿಷೇಕ್ ಕೇಳಿಸಿಕೊಂಡೇ ಸಿನಿಮಾರಂಗದಲ್ಲಿ ಇನ್ನೂ ಉಳಿದುಕೊಂಡಿದ್ದಾರೆ.
ಹಾಗೆ ನೋಡಿದರೆ 2020 ರಲ್ಲಿ ಬಿಡುಗಡೆಯಾದ breath into the shadows ಮತ್ತು ಈ ವರ್ಷ ಬಿಡುಗಡೆಯಾದ ದಸ್ವಿ ಸಿನಿಮಾದಲ್ಲಿ ಹಾಗೆ ಗುರು ಸಿನಿಮಾದಲ್ಲಿ ಅಭಿಷೇಕ್ ಒಳ್ಳೆಯ performance ಅನ್ನೇ ಕೊಟ್ಟಿದ್ರು. ಆದ್ರೂ ಅವರ flop ಸಿನಿಮಾಗಳ ಸಂಖ್ಯೆಯೇ ದೊಡ್ಡದಿರೋದರಿಂದ ಅವರನ್ನ ಇನ್ನೂ ಸ್ಟಾರ್ ಅಂತ ಜನ ಒಪ್ಪಿಕೊಂಡಿಲ್ಲ. ಟ್ರೊಲ್ ಮಾಡ್ತಾನೆ ಇರುತ್ತಾರೆ.

ಇದಷ್ಟೇ ಅಲ್ಲದೇ ಮಿಸ್‌ ವಲ್ಡ್‌ ಆಗಿರುವ ಐಶ್ವರ್ಯ ರೈ ಅವರನ್ನ ಮದುವೆ ಆದಮೇಲೂ ಕೂಡ ಹಲವಾರು ಬಾರಿ ಅವರು ಟ್ರೊಲ್ ಗೆ ಆಹಾರವಾಗಿದ್ದಾರೆ. ಆದ್ರೆ ಒಂದು ವಿಷಯ ನೀವು ಗಮನಿಸಿರಬಹುದು ಸ್ನೇಹಿತರೇ ಎಷ್ಟೇ ಟ್ರೊಲ್ ಆದ್ರೂ, ಯಾರೇ ಯಾವುದೇ ವಿಷಯಕ್ಕೆ ಆಡಿಕೊಂಡ್ರೂ ಕೂಡ ಅಭಿಷೇಕ್ ಅದನ್ನ ತುಂಬಾ ಗ್ರೇಸ್ ಫುಲ್ ಹಾಗೆ ಹ್ಯಾಂಡಲ್ ಮಾಡುತ್ತಾ ಬಂದಿದ್ದಾರೆ.

ಈಗೀಗಂತೂ ಟ್ರೋಲ್‌ಗಳನ್ನ ಫೇಸ್‌ ಮಾಡಿ ಮಾಡಿ ಅಭಿಷೇಕ್‌ ಬಚ್ಚನ್‌ಗೆ ಟ್ರೋಲ್‌ಗಳನ್ನ ಹ್ಯಾಂಡಲ್‌ ಮಾಡೋದು ತುಂಬಾನೇ ಈಸಿಯಾಗಿ ಬಿಟ್ಟಿದೆ. ಎಷ್ಟೇ ನೆಗೆಟೀವ್‌ ಟ್ರೋಲ್‌ ಆಗ್ಲಿ, ಎಷ್ಟೇ ನೆಗೆಟೀವ್‌ ಕಾಮೆಂಟ್‌ಗಳಾಗ್ಲಿ ಅದನ್ನೆಲ್ಲಾ ತುಂಬಾ ನಾಜೂಕಾಗಿ ಮತ್ತು ಪಾಸಿಟೀವ್‌ ಆಗಿ ಅಭಿಷೇಕ್‌ ಹ್ಯಾಂಡಲ್‌ ಮಾಡ್ತಾ ಬಂದಿದ್ದಾರೆ.

ಸ್ನೇಹಿತರೇ, ಅಭಿಷೇಕ್‌ ಬಚ್ಚನ್‌ ಒಟ್ಟು 44 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 2 ಚಿತ್ರ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದೆ, 3 ಚಿತ್ರ ಸೂಪರ್‌ ಹಿಟ್‌ ಆಗಿದೆ, 4 ಚಿತ್ರ ಸೆಮಿ ಹಿಟ್‌ ಆಗಿದೆ, 2 ಚಿತ್ರ ಹಿಟ್‌ ಆಗಿದೆ, 5 ಚಿತ್ರ ಎವರೇಜ್‌ ಹಾಗೆ ಸುಮಾರು 28 ಚಿತ್ರಗಳು ಪ್ಲಾಫ್‌ ಆಗಿದೆ. ಹಾಗಾಗಿ ಕೆಲವರು ಅಭಿಷೇಕ್‌ ಬಚ್ಚನ್‌ ಅವರನ್ನ ಪ್ಲಾಫ್‌ ಸ್ಟಾರ್‌ ಅಂತ ಸಹ ಕರೀತಾರೆ.

ಇನ್ನು ಅಭಿಷೇಕ್ ಬಚ್ಚನ್ ಬಾರಿ ನೆಟ್ಟಿಗರಿಂದ ಟ್ರೊಲ್ ಆಗಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಕೆಲವು ಉದಾಹರಣೆ ನೋಡ್ತಾ ಹೋಗೋಣ.

ಒಂದು ಸಲ ಒಬ್ಬ ವ್ಯಕ್ತಿ ಅಭಿಷೇಕ್‌ಗೆ “ನಿಮ್ಮಂತ ನಿರುದ್ಯೋಗಿಗಳಿಗೆ ಏನೂ ಕೂಡ ಅರ್ಥ ಆಗೋದಿಲ್ಲ, ಬುದ್ದಿನೆ ಇರೋದಿಲ್ಲ” ಅಂತ ಕಾಮೆಂಟ್‌ ಮಾಡಿದ್ದ. ಈ ರೀತಿಯ ನೆಗೆಟೀವ್‌ ಕಾಮೆಂಟ್‌ಗೆ ಅಭಿಷೇಕ್‌ ಕೂಲ್‌ ಆಗೀಯೇ ಆನ್ಸರ್‌ ಕೊಟ್ಟಿದ್ರು. “ಉದ್ಯೋಗಕ್ಕೆ ಮತ್ತು ಬುದ್ಧಿವಂತಿಕೆಗೆ ಸಂಬಂಧ ಇಲ್ಲ ಅಂತ ನಿಮ್ಮ ಕಾಮೆಂಟ್‌ ನೋಡಿದ ಮೇಲೆ ನನಗೆ ಗೊತ್ತಾಯ್ತು. ನಿಮಗೆ ಕೆಲಸ ಇದೆ ಅಂತ ಗೊತ್ತಾಗತ್ತೆ, ಅದರೆ ನಿಮಗೆ ಬುದ್ಧಿ ಇಲ್ಲ ಅಂತ ನಿಮ್ಮ ಕಾಮೆಂಟ್‌ ನೋಡಿದ್ರೆ ಗೊತ್ತಾಗತ್ತೆ” ಅಂತ ತಿರುಗೇಟು ಕೊಟ್ಟಿದ್ರು.

ಇನ್ನೊಂದು ಸಲ “ದ್ರೋಣ ಸಿನಿಮಾ ಆದಮೇಲೆ ನಿಮಗೆ ಸಿನಿಮಾಗಳು ಹೇಗೆ ಸಿಕ್ತು” ಅಂತ ವ್ಯಕ್ತಿಯೊಬ್ಬ ವ್ಯಂಗ್ಯವಾಗಿ ಕಾಮೆಂಟ್‌ ಮಾಡಿದ್ದ. ಇದಕ್ಕೂ ಕೂಡ ಅಭಿಷೇಕ್‌ ಕೂಲ್‌ ಆಗೆ ಉತ್ತರಿಸಿದ್ರು. “ಜೀವನದಲ್ಲಿ ನಿಮಗೆ ಯಾವುದೂ ಈಸಿಯಾಗಿ ಸಿಗೋದಿಲ್ಲ. ಕಷ್ಟ ಪಡಲೇ ಬೇಕು. ಕೆಲಸ ಇಲ್ಲ ಅಂತ ನಮ್ಮ ಗುರಿಯನ್ನ ನಾವು ಯಾವತ್ತೂ ಕಳ್ಕೋಬಾರದು. ನಮ್ಮ ಗುರಿ ಬಗ್ಗೆ ನಾವು ಯಾವಾಗಲೂ ಯೋಚನೆ ಮಾಡ್ತಾ ಇರಬೇಕು, ಗುರಿ ಸಾಧಿಸೋಕೆ ಯಾವಾಗಲೂ ಕೆಲಸದಲ್ಲಿ ನಿರತರಾಗಬೇಕು” ಅಂತ ಉತ್ತರ ಕೊಟ್ಟಿದ್ರು.

“ನೀವು ಈವಾಗಲೂ ನಿರುದ್ಯೋಗಿಯಾಗಿಯೇ ಇದ್ದೀರಾ” ಅಂತ ಒಬ್ಬಾತ ಕಾಮೆಂಟ್‌ ಮಾಡಿದ್ದ. “ನನಗೆ ಕೆಲಸ ಸಿಗೋದು, ಬಿಡೋದು ನಿಮ್ಮ ಕೈಯಲ್ಲಿದೆ. ನನ್ನ ಒಂದು ಸಿನಿಮಾ ನಿಮಗೆ ಇಷ್ಟ ಆಗದೇ ಇದ್ರೆ , ನನಗೆ ಮುಂದಿನ ಸಿನಿಮಾದಲ್ಲಿ ಕೆಲಸ ಸಿಗೋದಿಲ್ಲ. ಹಾಗಾಗಿ ನಾನು ನನ್ನ ಶಕ್ತಿಯನ್ನೇಲ್ಲಾ ಹಾಕಿ ಪ್ರಯತ್ನ ಮಾಡಿ, ನಿಮ್ಮ ಒಳ್ಳೆಯ ರೆಸ್ಪಾನ್ಸ್‌ಗೆ ಕಾಯ್ತಾ ಇರ್ತೀನಿ” ಅಂತ ಉತ್ತರ ಕೊಟ್ಟಿದ್ರು.

ಇನ್ನು 2021 ರಲ್ಲಿ ಅಭಿಷೇಕ್ ಬಚ್ಚನ್ ನಟನೆಯ ಸಿನಿಮಾ the ಬಿಗ್ ಬುಲ್ ಟ್ರೇಲರ್ ರಿಲೀಸ್‌ ಆಗಿತ್ತು. ಅದಕ್ಕೆ ಕಾಮೆಂಟ್ ಮಾಡಿದ ವ್ಯಕ್ತಿಯೊಬ್ಬ, ‘ಅಭಿಷೇಕ್ ಬಚ್ಚನ್, ನೀವು ಯಾವುದಕ್ಕೂ ಲಾಯಕ್ಕಿಲ್ಲ.. ನಿಮ್ಮ ಒಂದೇ ವಿಷಯದ ಬಗ್ಗೆ ನನಗೆ ಹೊಟ್ಟೆಕಿಚ್ಚುಇದೆ. ಅದ್ಯಾವ್ದು ಅಂದ್ರೆ ನಿಮಗೆ ತುಂಬಾ ಸುಂದರವಾದ ಹೆಂಡ್ತಿ ಇದ್ದಾಳೆ..’ ಎಂದು ಬರೆದಿದ್ದರು. ಈ ಕೆಟ್ಟ ಕಮೆಂಟ್ಗೆ ಅಭಿಷೇಕ್ ಬಚ್ಚನ್ ಖುದ್ದಾಗಿ ಪ್ರತಿಕ್ರಿಯಿಸಿ, ವ್ಯಂಗ್ಯವಾಡಿದ್ದಾರೆ. “ಒಕೆ. ಥ್ಯಾಂಕ್ಯು ಫಾರ್ ಯುವರ್ ಒಪಿನಿಯನ್ ಎಂದು ಮೊದಲು ಧನ್ಯವಾದ ತಿಳಿಸಿರುವ ಅಭಿಷೇಕ್ ಬಚ್ಚನ್, ಬಳಿಕ ಆತನನ್ನು ಪ್ರಶ್ನೆ ಮಾಡಿದ್ದಾರೆ. “ಕಾಮೆಂಟ್ನಲ್ಲಿ ಸುಮಾರು ಜನರನ್ನು ಟ್ಯಾಗ್ ಮಾಡಿದ್ದೀರಾ. ಇಲಿಯಾನಾ ಮತ್ತು ನಿಕಿ ಮದುವೆಯಾಗಿಲ್ಲ ಅಂತ ಗೊತ್ತಿದೆ. ಆದರೆ ನೀವು ಅಷ್ಟೆಲ್ಲಾ ಜನರಿಗೆ ಟ್ಯಾಗ್‌ ಮಾಡಿದ್ದಕ್ಕೆ ಯಾರ ಹೆಂಡ್ತಿ ಅಂತ ನನಗೆ ಗೊತ್ತಾಗ್ಲಿಲ್ಲ” ಅಂತ ಪ್ರತ್ಯುತ್ತರ ಕೊಟ್ಟಿದ್ರು.

ಇಂತಹ ಟ್ರೋಲ್‌ಗಳನ್ನ ಅಭಿಷೇಕ್‌ ಬಚ್ಚನ್‌ ದಿನಬೆಳಗಾದ್ರೆ ಸಾಕು ನೋಡ್ತಾ ಇರ್ತಾರೆ. ಈಗಲೂ ಕೂಡ ಇಂತಹದ್ದೇ ಒಂದು ಕಾಮೆಂಟ್‌ಗೆ ಅಭಿಷೇಕ್‌ ಬಹಳ ಬುದ್ಧಿವಂತಿಕೆಯಿಂದ ಉತ್ತರಕೊಟ್ಟಿದ್ದಾರೆ. “ಪೊನ್ನಿಯಿನ್‌ ಸೆಲ್ವನ್‌ 2″ ಚಿತ್ರ ಯಶಸ್ಸಿನ ನಂತರ ಐಶ್ವರ್ಯ ರೈ ಮತ್ತೂ ಫೇಮಸ್‌ ಆಗಿದ್ದಾರೆ. ಇದರ ಬಗ್ಗೆ ಅಭಿಷೇಕ್ ಬಚ್ಚನ್ ಖುಷಿಯಿಂದ ಟ್ವೀಟ್ ಮಾಡಿದ್ರು.

ಈ ಸಿನಿಮಾ ಬಗ್ಗೆ ಮಾತೇ ಹೊರಡುತ್ತಾ ಇಲ್ಲ, ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲರಿಗೂ ಅಭಿನಂದನೆ ಅಂತ ಟ್ವೀಟ್‌ ಮಾಡಿದ್ರು, ನನ್ನ ಹೆಂಡತಿ ಬಗ್ಗೆ ತುಂಬಾ ಪ್ರೌಡ್ ಫೀಲ್ ಆಗ್ತಿದೆ, ಇದು ಐಶ್ವರ್ಯ ರೈ ಅವರ ಬೆಸ್ಟ್ ಸಿನಿಮಾ ಅಂತ ಟ್ವೀಟ್ ಮಾಡಿದ್ರು. ಈ ಟ್ವೀಟ್‌ಗೆ ಒಬ್ಬ ವ್ಯಕ್ತಿ” ಇನ್ನುಮುಂದೆ ಐಶ್ಟರ್ಯ ಅವರಿಗೆ ಹೆಚ್ಚು ಸಿನಿಮಾ ಮಾಡೋಕೆ ಬಿಡಿ, ಮಗಳು ಆರಾಧ್ಯ ಅವರನ್ನ ನೀವೆ ನೋಡ್ಕೋಳಿ” ಅಂತ ಕಾಮೆಂಟ್‌ ಮಾಡಿದ್ರು. ಈ ಕಾಮೆಂಟ್‌ಗೆ ರೀ ಟ್ವೀಟ್ ಮಾಡಿದ ಅಭಿಷೇಕ್ ಬಚ್ಚನ್ “ಐಶ್ವರ್ಯಾಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಬೇಕಾ? ಸರ್.. ಯಾವುದಕ್ಕೂ ಅವರು ನನ್ನ ಪರ್ಮಿಷನ್‌ ತಗೋಬೇಕು ಅಂತಿಲ್ಲ. ಅದರಲ್ಲೂ ಅವರು ಇಷ್ಟಪಡುವ ವಿಚಾರದಲ್ಲಿ ನನ್ನ ಪರ್ಮಿಷನ್‌ ಬೇಕು ಅಂತಾನೇ ಇಲ್ಲ” ಅಂತ ಉತ್ತರ ಕೊಟ್ಟಿದ್ದಾರೆ.
ಇಲ್ಲಿ ಇನ್ನೊಂದು ವಿಷಯ ಇದೆ “ಧೂಮ್‌-2” ಚಿತ್ರದಲ್ಲಿ ಹೃತಿಕ್‌ ರೋಷನ್‌ ಜೊತೆ ಐಶ್ವರ್ಯ ರೈ ಕಿಸ್ಸಿಂಗ್‌ ಸೀನ್‌ ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌ ಕೂಡ ಇದಾರೆ. ಅದೂ ಕೂಡ ಈ ಚಿತ್ರವನ್ನ ಐಶ್ವರ್ಯ ರೈ ಒಪ್ಪಿಕೊಂಡಿದ್ದು ಮದುವೆ ಆದಮೇಲೆನೆ. ಅಂದ್ರೆ ಸಿನಿಮಾಗಳಿಗೆ ಅಥ್ವಾ ಪ್ರೋಫೆಷನ್‌ ವಿಷಯದಲ್ಲಿ ಅಭಿಷೇಕ್‌ ಒಪನ್‌ ಮೈಂಡೆಡ್ ಪರ್ಸನ್‌ ಅನ್ನೋದು ಅಂತ ಇದರಲ್ಲೇ ಗೊತ್ತಾಗತ್ತೆ. ಆದರೂ ಸಹ ಜನ ಅಭಿಷೇಕ್ ಗೆ ಈ ರೀತಿ ಕಾಮೆಂಟ್ ಹಾಕಿದ್ದಾರೆ. ಅದಕ್ಕೆ ಅಭಿಶೇಕ್ ಬಹಳ matured ಆಗಿ ಉತ್ತರ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply