ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಅಭಿಷೇಕ್ – ಅವಿವಾ!

masthmagaa.com:

ಅಂಬಿ ಮನೆಯಲ್ಲಿ ಮದುವೆ ಸಂಭ್ರಮ ತುಂಬಾ ಜೋರಾಗೆ ಸೌಂಡ್‌ ಮಾಡ್ತಾ ಇದೆ. ಅಂಬರೀಷ್‌ ಮತ್ತು ಸುಮಲತಾ ಅವರ ಮಗ ಅಭಿಷೇಕ ಅಂಬರೀಷ್‌ ಅವರ ಮದುವೆಗೆ ಎಲ್ಲಾ ಸಿದ್ದತೆಗಳು ನಡೀತಾ ಇದೆ. ಕಲರ್‌ಫುಲ್‌ ಆಗಿ ಮನೆಯಲ್ಲಿ ಸಿಂಗಾರ ಮಾಡಿದ್ದಾರೆ. ಜೂನ್‌ 5ರಂದು ಅಭಿಷೇಕ್‌ ಮತ್ತು ಅವಿವಾ ಅವರ ವಿವಾಹ ಮಹೋತ್ಸವ ನಡೆಯಲಿದೆ. ಇಂದು ಹಳದಿ ಶಾಸ್ತ್ರದ ಕಾರ್ಯಕ್ರಮದಲ್ಲಿ ಬಿಳಿ ಬಟ್ಟೆಯಲ್ಲಿ ಅಭಿಷೇಕ್‌ ಮಿಂಚ್ತಾ ಇದಾರೆ.

ಜೂನ್​ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

-masthmagaa.com

Contact Us for Advertisement

Leave a Reply