ಇದರ ಮುಂದೆ 2G, 3G, 4G ಬಚ್ಚಾ..! 5G Technology Explained in Kannada

ಹಾಯ್ ಫ್ರೆಂಡ್ಸ್, 5G… ಇದು ನೀವು ಕಂಡು ಕೇಳರಿಯದ ಭಯಂಕರ ವೇಗದ ಇಂಟರ್ನೆಟ್. ನೀವು ಈಗಾಗಲೇ ತೆವಳುತ್ತಾ ಸಾಗುವ 2G ನೋಡಿದ್ದೀರಿ. ಕುಂಟುತ್ತಾ ಸಾಗುವ 3G ನೋಡಿದ್ದೀರಿ. ನಡೆಯುತ್ತಾ ಸಾಗುವ 4G ಕೂಡ ನೋಡಿದ್ದೀರಿ. ಆದ್ರೆ ಈಗ ರೆಡಿಯಾಗುತ್ತಿರೋದು ಅಂತಿಂಥಾ G ಅಲ್ಲ! ಇದು ಬಿರುಗಾಳಿಯಂತೆ ಓಡುತ್ತಾ ಸಾಗುವ 5G. The Fifth Generation High Speed Internet! ಇದರ ಒಂದೊಂದು ಮಾಹಿತಿಯೂ ಅತ್ಯಂತ ರೋಚಕ. ಇದರ ಸ್ಪೀಡು ಎಷ್ಟು ಅಂತಾ ಕೇಳಿದ್ರೆ ನೀವು ನಡುಗಿ ಹೋಗ್ತೀರಿ. 5G ಬಂದರೆ ಏನೇನು ಕ್ರಾಂತಿ ಆಗುತ್ತೆ ಅಂತ ಗೊತ್ತಾದರೆ ನಿಮ್ಮ ತಲೆ ತಿರುಗುತ್ತೆ.

5G ಅಂದ್ರೆ ಏನು..?
ಸಿಂಪಲ್ಲಾಗಿ ಹೇಳಬೇಕು ಅಂದ್ರೆ 5G ಅಂದ್ರೆ ಫಿಫ್ತ್ ಜನರೇಶನ್ ಅಂತಾ ಅರ್ಥ. ಇಂಟರ್ನೆಟ್ ವಿಚಾರಕ್ಕೆ ಬಂದಾಗ 70-80ರ ದಶಕದಲ್ಲಿ 1G ಇತ್ತು. ಆಗ ಬೇಸಿಕ್ ಕಾಲಿಂಗ್ ಎಲ್ಲ ಇತ್ತು. ನಂತರ 1991ರಲ್ಲಿ 2G ಆರಂಭ ಆಯ್ತು. ಅದ್ರಲ್ಲಿ ಮೊದಲ ಬಾರಿಗೆ ಮೊಬೈಲ್‌ಗೆ ಇಂಟರ್ನೆಟ್ ಬಂತು. ಆದ್ರೆ ಬಾಳ ಸ್ಲೋ ಇತ್ತು. ಬರೀ ಒಂದು MB ಡೌನ್ಲೋಡ್ ಆಗೋಕೆ ಮಿನಿಮಮ್ 4-5 ಸೆಕೆಂಡ್ ಬೇಕಾಗ್ತಿತ್ತು. ನಂತರ 1999ರಲ್ಲಿ 3G ಬಂತು. ಆಗ ಇಂಟರ್ನೆಟ್ ಸ್ಪೀಡ್ ಚೂರ್ ಜಾಸ್ತಿಯಾಗಿ ಒಂದು ಸೆಕೆಂಡಿಗೆ 3ರಿಂದ4 MB ತನಕ ಏರ್ತು. ಆದಾದ ನಂತರ ದೊಡ್ಡ ಸೌಂಡ್ ಮಾಡಿದ್ದು ನಾವು ನೀವು ಈಗ ಬಳಸ್ತಾ ಇರೋ 4G. ಫೋರ್ ಜಿ ಬಂದ ನಂತರ ಮೊಬೈಲ್ ಇಂಟರ್ನೆಟ್ ಸ್ಪೀಡು 20MB ಪ್ರತಿ ಸೆಕೆಂಡ್​​ವರೆಗೂ ಸಿಗ್ತಾ ಇದೆ. ಇದೇ ಬಾಳ ಸ್ಪೀಡಾಯ್ತಲ್ಲ ಗುರು ಅಂದ್ಕೋತಿರೋವಾಗ್ಲೇ ಈಗ 5G ಚರ್ಚೆ ಜೋರಾಗ್ತಿದೆ‌. ಈಗಾಗಲೇ ಅಮೆರಿಕ, ಚೀನಾ ಮತ್ತು ಕೆಲ ಯುರೋಪಿಯನ್ ದೇಶಗಳಲ್ಲಿ 5G ಟೆಸ್ಟಿಂಗ್ ಶುರುವಾಗಿದೆ. ಸ್ಯಾಮ್ಸಂಗ್, ಹುವಾವೆಯಂಥ ಕಂಪನಿಗಳು ಆಲ್ರೆಡೆ 5G ಫೋನ್​ಗಳನ್ನ ಬಿಡುಗಡೆ ಮಾಡಿವೆ‌.

5Gಯಲ್ಲಿ ಇಂಟರ್ನೆಟ್ ಸ್ಪೀಡ್ ಎಷ್ಟಿರುತ್ತೆ ಗೊತ್ತಾ..?
5G ಯಲ್ಲಿ ಇಂಟರ್ನೆಟ್ ಭಯಂಕರ ಸ್ಪೀಡ್ ಆಗಿ ಇರುತ್ತೆ. ಈಗಿರೋ ಹತ್ತಿಪ್ಪತ್ತು MB ಪ್ರತಿ ಸೆಕೆಂಡ್ ಬದಲಾಗಿ 2GB ಪ್ರತಿ ಸೆಕೆಂಡ್ ಆಗುತ್ತೆ‌. ಅಂದ್ರೆ ಒಂದು 4K ರೆಸಲ್ಯೂಶನ್ ಮೂವಿಯನ್ನ ನೀವು ಬರೀ 1 ಸೆಕೆಂಡ್​​ನಲ್ಲಿ ಡೌನ್ಲೋಡ್ ಮಾಡಬಹುದು.! ಜಸ್ಟ್ ಇಮ್ಯಾಜಿನ್! ಗಂಟೆಗಟ್ಟಲೆ ತೆಗೆದುಕೊಳ್ಳುತ್ತಿದ್ದ ಒಂದು ಮೂವಿ ಈಗ ಜಸ್ಟ್ ಒಂದು ಸೆಕೆಂಡ್​​ನಲ್ಲಿ ಡೌನ್ಲೋಡ್!

5G ಹೇಗೆ ಕೆಲಸ ಮಾಡುತ್ತೆ?
ಮಿಲಿ ಮೀಟರ್ ವೇವ್ ಟೆಕ್ನಾಲಜಿಯಲ್ಲಿ 5G ಕೆಲಸ ಮಾಡುತ್ತೆ. ಈ ಟೆಕ್ನಾಲಜಿಯಲ್ಲಿ ಸ್ಪೀಡ್ ವಿಪರೀ‌ತ ಇರುತ್ತೆ. ಆದ್ರೆ ಜಾಸ್ತಿ ದೂರ ಕವರೇಜ್ ಇರಲ್ಲ. ಜಸ್ಟ್ ಒಂದು ಮರ ಅಥವಾ ಗೋಡೆ ಅಡ್ಡ ಆದರೂ ಸಿಗ್ನಲ್ ವೀಕ್ ಆಗುತ್ತೆ. ಸೋ ಈಗ ನಾವು ಏರಿಯಾಗೆ ಒಂದು ದೊಡ್ಡ ಟವರ್ ಹಾಕ್ತೀವಲ್ಲಾ? ಅದರ ಬದಲಾಗಿ ಒಂದೇ ಏರಿಯಾದಲ್ಲಿ ಹತ್ತಾರು ಸಣ್ಣ ಟವರ್ ಹಾಕಿ ಈ 5G ನೋಡ್‌ಗಳನ್ನ ಹಾಕಬೇಕಾಗುತ್ತೆ. ಆಗ ಒಂದು ಕಂಬದ ಸಿಗ್ನಲ್ ವೀಕ್ ಆದರೆ ಮತ್ತೊಂದು ಹತ್ತಿರದ ಕಂಬದಿಂದ ಸಿಗ್ನಲ್ ತಗೊಳೋ ಥರ ಮಾಡಬೇಕಾಗುತ್ತೆ. ಮೊಬೈಲ್ ಒಳಗೂ ಅಷ್ಟೆ‌. ಈಗಿನ ಥರ ಒಂದು ಆಂಟೆನಾ ಇಟ್ಟರೆ ಸಾಕಾಗಲ್ಲ. ಮೊಬೈಲ್‌ನ ಒಳಭಾಗದಲ್ಲೇ ಸುತ್ತಲೂ ಹತ್ತಾರು ಮೈಕ್ರೋ ಆಂಟೆನಾಗಳನ್ನ ಅಳವಡಿಸಬೇಕಾಗುತ್ತದೆ. ಇದೆಲ್ಲಾ ಆಗಲು 5G ಫುಲ್ ರೆಡಿಯಾಗಿ ಎಲ್ಲರ ಕೈ ಸೇರಲು 2025 ಆದರೂ ಆಗುತ್ತೆ. ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತದ ಕೆಲವೇ ಕೆಲವು ಆಯ್ದ ನಗರಗಳಲ್ಲಿ 5G ಟೆಸ್ಟಿಂಗ್ ಶುರುವಾಗುವ ನಿರೀಕ್ಷೆ ಇದೆ. ಭಾರತದಲ್ಲಿ 4Gಯಲ್ಲಿ ಕ್ರಾಂತಿ ಮಾಡಿದ ರಿಲಯನ್ಸ್ ಜಿಯೋ 5G ಯಲ್ಲೂ ಎಲ್ಲರಿಗಿಂತ ಮೊದಲು ಮುನ್ನುಗ್ಗಲು ಪ್ಲಾನ್ ಮಾಡಿದೆ.

5G ಬಂದರೆ ಏನಾಗುತ್ತೆ..?
5G ಬಂದರೆ ಒಂದು ಸೆಕೆಂಡಿಗೆ ಒಂದು ಸಿನಿಮಾ ಡೌನ್ಲೋಡ್ ಮಾಡೋದು ಮಾತ್ರ ಅಲ್ಲ! ಇಡೀ ಜಗತ್ತೇ ಬದಲಾಗುತ್ತೆ ಫ್ರೆಂಡ್ಸ್.! ದೂರದ ಸಿಟಿಯಲ್ಲಿ ಕುಳಿತ ಡಾಕ್ಟರ್, ಮತ್ತೊಂದು ಕುಗ್ರಾಮದಲ್ಲಿರುವ ರೋಗಿಗೆ ರೋಬೋಟ್ ಮೂಲಕ ಆಪರೇಷನ್ ಮಾಡಲು ಸಾಧ್ಯವಾಗುತ್ತದೆ. ಸೆಲ್ಫ್ ಡ್ರೈವ್ ಕಾರುಗಳು ತಮಗೆ ತಾವೇ ಮಾತನಾಡಿಕೊಂಡು ಅತ್ಯಂತ ವೇಗವಾಗಿ ಮತ್ತು ಸೇಫಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರನ್ನ ತಲುಪಿಸಲು ಸಾಧ್ಯವಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಡಿಮೆ ಬೆಲೆಗೆ ನೀಡಲು ಸಾಧ್ಯವಾಗುತ್ತದೆ. ಈಗಿನ ವಿಡಿಯೋ ಗೇಮ್​ಗಳು, ವರ್ಚುವಲ್ ರಿಯಾಲಿಟಿ ಗೇಮ್​ಗಳಾಗಿ ಬದಲಾಗುತ್ತವೆ. 4K ಗುಣಮಟ್ಟದ ಲೈವ್ ವಿಡಿಯೋ ಸ್ಟ್ರೀಮಿಂಗ್ ಸಾಧ್ಯವಾಗುತ್ತದೆ. ಈ ರೀತಿ ಹತ್ತು ಹಲವು ಅದ್ಭುತಗಳು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ಸ್ವಲ್ಪ ಟೈಮ್ ಬೇಕು. ಇದಾಗಿತ್ತು ನೆಕ್ಸ್ಟ್ ಜನರೇಶನ್ ಮೊಬೈಲ್ ಟೆಕ್ನಾಲಜಿಯಾದ 5G ಬಗ್ಗೆ ನಿಮಗೆ, ನಿಮ್ಮ ಭಾಷೆಯಲ್ಲಿ ತಿಳಿಸಿಕೊಡುವ ಪ್ರಯತ್ನ. ಈ ಮಾಹಿತಿಯನ್ನ ನೀವು ಮಾತ್ರ ಇಟ್ಟುಕೊಳ್ಳದೆ ಎಲ್ಲರಿಗೂ ಶೇರ್ ಮಾಡಿ.

Contact Us for Advertisement

Leave a Reply