83 ಸಿನಿಮಾದಲ್ಲಿ ಕಪಿಲ್ ಆಗಿ ರಣವೀರ್..! ಶೂಟಿಂಗ್ ವೇಳೆ ಅತ್ತಿದ್ಯಾಕೆ..?

ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 83 ಸಿನಿಮಾ ತುಂಬಾ ಸಮಯದಿಂದ ಫುಲ್ ಸುದ್ದಿಯಲ್ಲಿದೆ. ಕ್ರಿಕೆಟರ್ ಕಪಿಲ್ ದೇವ್ ಅವರ ಲುಕ್‍ನಲ್ಲಿರುವ ರಣವೀರ್ ಸಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ಸಿನಿಮಾಗಾಗಿ ನಿರ್ದೇಶಕ ಕಬೀರ್ ಖಾನ್ ತುಂಬಾ ಕಷ್ಟಪಟ್ಟಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ರಣವೀರ್ ಸಿಂಗ್ ಕೂಡ ಈ ಸಿನಿಮಾ ಶೂಟಿಂಗ್ ವೇಳೆ world cup ಕೈಗೆ ನೀಡುವಾಗ ಅತ್ತು ಬಿಟ್ಟಿದ್ದರಂತೆ.

ಈ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಬೀರ್ ಖಾನ್, ರಣವೀರ್ ಸಿಂಗ್ ಕೊನೆಯ ಸೀನ್ ಶೂಟ್ ವೇಳೆ ಭಾರದ ಮನಸ್ಸಿನಿಂದ ಕಟ್ ಹೇಳಿದ್ದರು. ಅವರ ಮುಖದಲ್ಲಿ ಖುಷಿ ಮತ್ತು ದುಃಖ ಎರಡೂ ಭಾವನೆಗಳು ಎದ್ದು ಕಾಣುತ್ತಿದ್ದವು ಎಂದು ಹೇಳಿದ್ದಾರೆ. ಲಂಡನ್‍ನ ಲಾಡ್ರ್ಸ್ ಮೈದಾನದಲ್ಲಿ 5 ದಿನಗಳ ಕಾಲ ಸಿನಿಮಾ ಶೂಟಿಂಗ್ ನಡೆದಿತ್ತು. ಅಲ್ಲದೆ ಮೈದಾನದ ಲಾಕರ್ ಮತ್ತು ಡ್ರೆಸ್ಸಿಂಗ್ ರೂಂ ಎರಡನ್ನೂ ಚಿತ್ರತಂಡ ಶೂಟಿಂಗ್‍ಗೆ ಬಳಸಿದೆ. 1983ರಲ್ಲಿ ಕಪಿಲ್ ದೇವ್‍ಗೆ ಹೇಗೆ world cup ನೀಡಲಾಗಿತ್ತೋ ಅದೇ ರೀತಿ ರಣವೀರ್ ಸಿಂಗ್ ಅವರಿಗೆ ನೀಡುವಂತೆ ಶೂಟಿಂಗ್ ನಡೆಸಲಾಗಿದೆ. ಸಿನಿಮಾದ ಕೊನೆಯ ದೃಶ್ಯವನ್ನು ನಿಜವಾದ ವಿಶ್ವಕಪ್ ಜೊತೆಗೇ ಶೂಟಿಂಗ್ ಮಾಡಲಾಗಿದ್ದು, ಈ ವೇಳೆ ರಣವೀರ್ ಸಿಂಗ್ ಅತ್ತುಬಿಟ್ಟಿದ್ರು ಅಂತ ಹೇಳಿದ್ದಾರೆ.

https://www.instagram.com/p/Bx_9jIyAc48/?utm_source=ig_web_copy_link

Contact Us for Advertisement

Leave a Reply