ನಟನೆ ಅಂದ್ರೇನೇ ಇಷ್ಟ ಇರಲಿಲ್ಲ ಎಂದಿದ್ದ ನಟಿ ತ್ರಿಶಾಗೆ 40 ವರ್ಷ!

masthmagaa.com:

“ಪೊನ್ನಿಯಿನ್ ಸೆಲ್ವನ್ 2” ಚಿತ್ರದ ಅದ್ಭುತ ನಟನೆಯ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದ ತ್ರಿಶಾ ಅವರ ಹಳೆ ಸಂದರ್ಶನದ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ತ್ರಿಶಾ “ನನಗೆ ಆಕ್ಟಿಂಗ್‌ನಲ್ಲಿ ಇಂಟ್ರೆಸ್ಟ್‌ ಇಲ್ಲ” ಅಂತ ಹೇಳದ್ದಾರೆ. ಸೆಪ್ಟಂಬರ್‌ 2022ಕ್ಕೆ ತ್ರಿಶಾ ಇಂಡಸ್ಟ್ರಿಗೆ ಬಂದು ಬರೋಬ್ಬರಿ 20 ವರ್ಷ ಆಗಿತ್ತು. ತಮ್ಮ ಸಿನಿ ಜರ್ನಿಯ ಒಂದು ಟೈಮ್‌ನಲ್ಲಿ “ನನಗೆ ಆಕ್ಟಿಂಗ್‌ನಲ್ಲಿ ಇಷ್ಟ ಇಲ್ಲ” ಅಂತ ಹೇಳಿದ್ದಾರೆ.

ನಟಿ ಗುರುವಾರ (ಮೇ 4) ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿ ಮಾಡೆಲಿಂಗ್‌ಗೆ ಎಂಟ್ರಿ ಕೊಟ್ಟಿದ್ದ ನಟಿಯ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ ಹಳೆ ವಿಡಿಯೋ ವೈರಲ್‌ ಆಗಿದೆ. ಯುಗಿ ಸೇತು ಅವರ ಥ್ರೋಬ್ಯಾಕ್‌ ಸಂದರ್ಶನದಲ್ಲಿ ಮಾತನಾಡಿದ ನಟಿ, “ನಾನು ಮೊದಲು ಮಾಡೆಲಿಂಗ್‌ ಅಷ್ಟೇ ಆಯ್ಕೆ ಮಾಡಿಕೊಂಡಿದ್ದೆ. ಇದು ನನ್ನ ಸ್ವಂತ ನಿರ್ಧಾರ ಆಗಿತ್ತು. ನನಗೆ ದೊಡ್ಡ ಪರದೆಗೆ ಹೋಗೋ ಆಸೆ ಯಾವತ್ತೂ ಇಲ್ಲ, ನಟನೆ ನನ್ನ ಕಪ್‌ ಆಫ್‌ ಟೀ ಅಲ್ಲ, ನಾನ್‌ ಏನೀದ್ರೂ ಮಾಡೆಲಿಂಗ್‌ ಅಲ್ಲೇ ಮುಂದುವರಿತೀನಿ” ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply