ಕೆನಡಾ ಆಯ್ತು ಈಗ ನ್ಯೂಜಿಲೆಂಡ್‌ನಲ್ಲೂ ವ್ಯಾಕ್ಸಿನ್‌ ವಿರುದ್ದ ಪ್ರತಿಭಟನೆ

masthmagaa.com:

ಕೆನಡಾ ನಂತರ ಈಗ ನ್ಯೂಜಿಲೆಂಡ್‌ನಲ್ಲೂ ಕೂಡ ಟ್ರಕ್‌ ಡ್ರೈವರ್‌ಗಳು ಖಡ್ಡಾಯ ವ್ಯಾಕ್ಸೀನ್‌ ವಿರುದ್ಧ ಪ್ರತಿಭಟನೆ ಶುರು ಮಾಡಿಕೊಂಡಿದ್ದಾರೆ. ಸಾಲು ಸಾಲು ಟ್ರಕ್‌ಗಳು ನ್ಯೂಜಿಲೆಂಡ್‌ ಪಾರ್ಲಿಮೆಂಟ್‌ ಬೀಹೈವ್‌ ಬಳಿಯ ರಸ್ತೆಯನ್ನ ಬ್ಲಾಕ್‌ ಮಾಡಿದ್ದವು. ಕೆನಡಾದಲ್ಲಿ ಕಂಡಂತೆ ಇಲ್ಲೂ ಕೂಡ ಟ್ರಕ್‌ಗಳ ಮೇಲೆ “ನಮಗೆ ನಮ್ಮ ಸ್ವಾತಂತ್ರ್ಯ ಕೊಡಿ”, “ದಬ್ಬಾಳಿಕೆ ಒಪ್ಪಿಗೆಯಲ್ಲ” ಎಂಬ ಸಾಲುಗಳು ರಾರಾಜಿಸಿದ್ದವು. ಪ್ರತಿಭಟನಾಕಾರ ಮಾತನಾಡಿ “ನಾನು ವ್ಯಾಕ್ಸೀನ್‌ ಹಾಕಿಸಿಕೊಂಡಿದೀನಿ ಆದ್ರೂ ನಾನು ಖಡ್ದಾಯ ಲಸಿಕೆ ಹಾಕಿಸ್ಬೇಕು ಅನ್ನೋದನ್ನ ವಿರೋಧಿಸುತ್ತೇನೆ, ವ್ಯಾಕ್ಸಿನ್‌ ಬೇಡವಾದವರಿಗೂ ಹಾಕಿಸ್ಕೊಳ್ಳಿ ಅಂತ ಬಲವಂತ ಮಾಡೋದು ಅವಮಾನಕರ” ಅಂತ ಹೇಳಿದ್ದಾನೆ. ಅಲ್ಲಿನ ಪ್ರಧಾನಿ ಜೆಸಿಂಡಾ ಅರ್ಡರ್ನ್‌ ಮಾತನಾಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವ ಯಾವುದೇ ಉದ್ದೇಶವಿಲ್ಲ, ನ್ಯೂಜಿಲೆಂಡ್‌ನ 96% ಜನ ವ್ಯಾಕ್ಸಿನ್‌ ಹಾಕಿಸಿಕೊಂಡು ಸರ್ಕಾರದ ಲಸಿಕೆ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ ಅಂತ ಹೇಳಿದ್ದಾರೆ. ಈ ಪ್ರತಿಭಟನೆಯಲ್ಲಿ ಕೆಲವರು ಕೆನಡಾದ ಧ್ವಜಗಳನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ.

-masthmagaa.com

Contact Us for Advertisement

Leave a Reply