ಸೋತ ಬಳಿಕ ವೋಟಿಂಗ್ ಮಶೀನ್​ ಸೀಜ್​​​ಗೆ ಟ್ರಂಪ್ ಆದೇಶ!

masthmagaa.com:

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಚುನಾವಣೆಯಲ್ಲಿ ಸೋತ ಬಳಿಕ ವೋಟಿಂಗ್ ಮಶೀನ್​​ಗಳನ್ನು ಸೀಜ್ ಮಾಡುವಂತೆ ದೇಶದ ಟಾಪ್ ಮಿಲಿಟರಿ ಅಧಿಕಾರಿಗಳಿಗೆ ಆದೇಶಿಸಿದ್ರು ಅಂತ ಗೊತ್ತಾಗಿದೆ. ಟ್ರಂಪ್ ಸಹಿ ಇರುವ ಎಕ್ಸಿಕ್ಯುಟಿವ್ ಆರ್ಡರ್​​ನ ಪ್ರತಿಯೊಂದನ್ನು ನ್ಯಾಷನಲ್ ಆರ್ಕೈವ್​​​​​​​​ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ. ತಮ್ಮ ಸೋಲಿನ ಬಳಿಕ ಅಂದ್ರೆ 2020ರ ಡಿಸೆಂಬರ್ 16ರಂದು ಈ ಆದೇಶಕ್ಕೆ ಟ್ರಂಪ್ ಸಹಿ ಹಾಕೋಕೆ ರೆಡಿಯಾಗಿದ್ರು. ಈ ಮೂಲಕ ಮತದಾರರ ಆಯ್ಕೆಗೆ ವಿರುದ್ಧವಾಗಿ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧತೆ ಶುರು ಮಾಡಿದ್ರು ಅಂತ ಗೊತ್ತಾಗಿದೆ. ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ ಸಂಬಂಧ ಹೌಸ್​​ ಆಫ್ ರೆಪ್ರೆಸೆಂಟಿಟಿವ್​​​ನ ಸಮಿತಿಯೊಂದು ತನಿಖೆ ನಡೆಸ್ತಿದೆ. ಇದು 750 ದಾಖಲೆಗಳನ್ನು ಸಂಗ್ರಹಿಸಿದ್ದು, ಅದ್ರಲ್ಲಿ ಇದು ಕೂಡ ಒಂದಾಗಿದೆ. ಈ ದಾಖಲೆಗಳನ್ನು ಬಿಡುಗಡೆ ಮಾಡ್ಬಾರ್ದು ಅಂತ ಡೊನಾಲ್ಡ್ ಟ್ರಂಪ್ ಸುಪ್ರೀಂಕೋರ್ಟ್​ ಮೊರೆ ಹೋಗಿದ್ರು. ಆದ್ರೆ ಕೋರ್ಟ್​​ ಟ್ರಂಪ್ ಮನವಿಯನ್ನು ತಿರಸ್ಕರಿಸಿತ್ತು.

-masthmagaa.com

Contact Us for Advertisement

Leave a Reply