ರಾಜಸ್ತಾನಕ್ಕೂ ಕಾಶ್ಮೀರಕ್ಕೂ ಸಂಬಂಧವೇನು?: ಮಲ್ಲಿಕಾರ್ಜುನ್‌ ಖರ್ಗೆ

masthmagaa.com:

ಲೋಕಸಭಾ ಚುನಾವಣೆಗೆ ಇನ್ನೇನು ಬೆರಳಣಿಕೆ ದಿನ ಬಾಕಿ ಇದೆ. ಹೀಗಾಗಿ ರಾಜಕೀಯ ವಾಗ್ದಾಳಿಗಳು ಕೂಡ ಕಾವೇರಿವೆ. ಇದೀಗ AICC ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ರಾಜಸ್ತಾನಕ್ಕೂ ಕಾಶ್ಮೀರಕ್ಕೂ ಏನು ಸಂಬಂಧ ಅಂತ ಹೇಳಿಕೆ ನೀಡಿರೋದು ರಾಜಕೀಯ ಕಿಡಿ ಹಚ್ಚಿದೆ. ಅಂದ್ಹಾಗೆ ರಾಜಸ್ತಾನದ ಚುನಾವಣಾ ರ್ಯಾಲಿಯಲ್ಲಿ ಮಾತಾಡ್ತಾ ಖರ್ಗೆಯವ್ರು, ಮೋದಿ ಭಾಷಣ ಉಲ್ಲೇಖಿಸಿ, 370 ರದ್ದು ಮಾಡಿರೋದು ರಾಜಸ್ತಾನದ ವಿಚಾರ ಅಲ್ಲ. ಅದು ಜಮ್ಮು ಕಾಶ್ಮೀರದ ವಿಚಾರ. ಆದ್ರೆ ಮೋದಿ ರಾಜಸ್ತಾನದಲ್ಲಿ 370 ಬಗ್ಗೆ ಮಾತಾಡ್ತಾರೆ. ರಾಜಸ್ತಾನಕ್ಕೂ ಕಾಶ್ಮೀರಕ್ಕೂ ಏನು ಸಂಬಂಧ ಅಂತ ಹೇಳಿದ್ದಾರೆ. ಇದಕ್ಕೆ ಮೋದಿ ಈಗ, ಖರ್ಗೆ ಹೇಳಿಕೆಯಿಂದ ನನಗೆ ನಾಚಿಕೆಯಾಯ್ತು. ಜಮ್ಮು ಕಾಶ್ಮೀರ ರಕ್ಷಿಸುವಲ್ಲಿ ರಾಜಸ್ತಾನ ಮತ್ತು ಬಿಹಾರದ ಯುವಕರು ಅತ್ಯುನ್ನತ ತ್ಯಾಗ ಮಾಡಿದ್ದಾರೆ. ಆದ್ರೆ ಖರ್ಗೆ ಎರಡಕ್ಕೂ ಏನ್‌ ಸಂಬಂಧ ಅಂತಾರೆ. ಇದು ಅವ್ರ ತುಕ್ಡೆ ತುಕ್ಡೆ ಮನಸ್ಥಿತಿಯನ್ನ ತೊರಿಸುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply