ದೇಶದಲ್ಲಿ ಬ್ಲಾಕ್​​​​ಫಂಗಸ್ ಹಾವಳಿ! ಬಾಲಕ ಬಲಿ!

masthmagaa.com:

ದೇಶದಲ್ಲಿ ಬ್ಲಾಕ್ ಫಂಗಸ್ ಹಾವಳಿ ಜಾಸ್ತಿಯಾಗ್ತಿದೆ. ದೇಶದಲ್ಲಿ ಬುಧವಾರದವರೆಗೆ 5,500 ಮಂದಿಗೆ ಈ ಭೀಕರ ಅಂಟಿದ್ದು, 126 ಮಂದಿ ಸಾವನ್ನಪ್ಪಿದ್ಧಾರೆ ಅಂತ ಗೊತ್ತಾಗಿದೆ. ಈ ಬ್ಲಾಂಕ್ ಫಂಗಸ್​ ದೊಡ್ಡವರು, ಚಿಕ್ಕವರೆನ್ನದೆ ಎಲ್ಲರಲ್ಲೂ ಹರಡುತ್ತಿದೆ. ಗುಜರಾತ್​​​ನ ಅಹ್ಮದಾಬಾದ್​​ನಲ್ಲಿ 13 ವರ್ಷದ ಬಾಲಕ ಬ್ಲಾಕ್ ಫಂಗಸ್ ಬಂದಿದ್ದು, ಆಪರೇಷನ್ ಮಾಡಲಾಗಿದೆ. ಬಾಲಕನ ತಾಯಿ ಕೂಡ ಕೊರೋನಾಗೆ ಬಲಿಯಾಗಿದ್ದು, ಬಾಲಕನಿಗೂ ಕೊರೋನಾ ಬಂದಿತ್ತು ಅಂತ ತಿಳಿದು ಬಂದಿದೆ. ಒಂದ್ಕಡೆ ಬ್ಲಾಕ್​ ಫಂಗಸ್ ಹಾವಳಿ ಜಾಸ್ತಿಯಾಗ್ತಿದ್ರೆ, ಮತ್ತೊಂದ್ಕಡೆ ರಾಜ್ಯಗಳ ಬಳಿ ಅದರ ಚಿಕಿತ್ಸೆಗೆ ಬೇಕಾದ liposomal amphotericin B ಔಷಧ ಸ್ಟಾಕ್ ಇಲ್ಲ.. ಹೀಗಾಗಿ ಈ ಔಷಧ ಉತ್ಪಾದಿಸಲು ಮತ್ತೂ 5 ಔಷಧ ಉತ್ಪಾದಕ ಕಂಪನಿಗಳಿಗೆ ಲೈಸೆನ್ಸ್ ಕೊಟ್ಟಿದ್ದೀವಿ. ಈ ಸಂಸ್ಥೆಗಳು ಜುಲೈನಿಂದ ಪ್ರತಿ ತಿಂಗಳು 1.11 ಲಕ್ಷ ಬಾಟಲಿ ಔಷಧಿ ಉತ್ಪಾದನೆ ಮಾಡಲಿವೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಧಾನಿ ಮೋದಿ ಕೂಡ, ಬ್ಲಾಕ್​ ಫಂಗಸ್​ ಹೊಸ ಸವಾಲಾಗಿದ್ದು, ಅದನ್ನು ಎದುರಿಸಲು ರೆಡಿಯಾಗಬೇಕಿದೆ ಅಂತ ಹೇಳಿದ್ಧಾರೆ. ಅಂದಹಾಗೆ 90 ಸಾವಿನೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ರೆ, 14 ಮಂದಿ ಮೃತಪಟ್ಟಿರೋ ಹರಿಯಾಣ 2ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply