ಯುಯಕ್ರೇನ್‌ಗೆ ಎಲಾನ್‌ ಮಸ್ಕ್‌ ಸ್ಟಾರ್‌ಲಿಂಕ್‌ ನೆರವು

masthmagaa.com:

ರಷ್ಯಾ ದಾಳಿಯಿಂದಾಗಿ ಯುಕ್ರೇನ್​​ನಲ್ಲಿ ಇಂಟರ್​ನೆಟ್ ಸೇವೆ ಹಲವು ಪ್ರದೇಶಗಳಲ್ಲಿ ಬಂದ್ ಆಗಿದೆ. ಹೀಗಾಗಿ ಯುಕ್ರೇನ್​​ನ ಡಿಜಿಟಲ್ ಟ್ರಾನ್ಸ್​ಫಾರ್ಮೇಷನ್ ಸಚಿವ ಮೈಕಾಲಿಯೋ ಫೆಡರೋವ್​​​​​ ಒಂದು ಎಲಾನ್ ಮಸ್ಕ್​​ಗೆ ಟ್ಯಾಗ್ ಮಾಡಿ ಒಂದು ಟ್ವೀಟ್ ಮಾಡಿದ್ರು. ನೀವು ಮಂಗಳ ಗ್ರಹವನ್ನು ವಸಾಹತು ಮಾಡಕ್ಕೆ ಪ್ರಯತ್ನಿಸಿರೋವಾಗ ರಷ್ಯಾ ಯುಕ್ರೇನ್​ನ್ನು ವಶಪಡಿಸಿಕೊಳ್ಳಲು ಯತ್ನಿಸ್ತಿದೆ. ನಿಮ್ಮ ರಾಕೆಟ್​​ಗಳು ಬಾಹ್ಯಾಕಾಶದಿಂದ ಯಶಸ್ವಿಯಾಗಿ ಇಳಿಯುತ್ತಿರುವಾಗ, ಯುಕ್ರೇನ್​ನಲ್ಲಿ ರಷ್ಯಾದ ರಾಕೆಟ್​​ಗಳು ಇಳಿಯುತ್ತಿವೆ.. ಹೀಗಾಗಿ ಯುಕ್ರೇನ್​​ಗೆ ಸ್ಟಾರ್​ಲಿಂಕ್​​ ಸ್ಟೇಷನ್​ ಒದಗಿಸಿ ಅಂತ ಮನವಿ ಮಾಡಿದ್ರು. ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಎಲಾನ್ ಮಸ್ಕ್​, ಸ್ಟಾರ್​ಲಿಂಕ್ ಸೇವೆ ಯುಕ್ರೇನ್​ನಲ್ಲಿ ಆಕ್ಟೀವ್ ಆಗಿದೆ. ಮತ್ತಷ್ಟು ಟರ್ಮಿನಲ್​​ಗಳನ್ನು ಯುಕ್ರೇನ್​ಗೆ ಕಳುಹಿಸ್ತೀವಿ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com:

 

Contact Us for Advertisement

Leave a Reply