ಅಕ್ಷಯ್‌ ಕುಮಾರ್‌ ನಟನೆಯ ಓ ಮೈ ಗಾಡ್‌ 2ಸಿನಿಮಾ ಆಗಸ್ಟ್‌ 11ಕ್ಕೆ ಬಿಡುಗಡೆ!

masthmagaa.com:

ಸದ್ಯ ಅಕ್ಷಯ್‌ಕುಮಾರ್‌ ಮುಂದಿನ ಚಿತ್ರದ ಹೊಸ ಪೋಸ್ಟರ್‌ ರಿಲೀಸ್‌ ಆಗಿದೆ. ಈ ಪೋಸ್ಟರ್‌ನಲ್ಲಿ ಅಕ್ಷಯ್‌ ಕುಮಾರ್‌ ಅವರನ್ನ ಗುರುತು ಹಿಡಿಯೋದು ಕಷ್ಟವಾಗಿ ಬಿಟ್ಟಿದೆ. ಓ ಮೈ ಗಾಡ್‌ ಪಾರ್ಟ್‌ 2ದಲ್ಲಿ ಅಕ್ಷಯ್‌ ಕುಮಾರ್‌ ಶಿವನ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ. ಈ ಹಿಂದೆ ಓ ಮೈ ಗಾಡ್‌ ಚಿತ್ರದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ಈಗ ಮತ್ತೊಂದು ಹಿಟ್‌ ಕೊಡೋಕೆ ಓ ಮೈ ಗಾಡ್‌ ಪಾರ್ಟ್‌ 2 ಬರ್ತಾ ಇದೆ. ಅಕ್ಷಯ್‌ ಕುಮಾರ್‌ ಇತ್ತೀಚೆಗಷ್ಟೆ ಉತ್ತರಾಖಂಡದ ಬದರಿನಾಥ ದೇವಾಲಯಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆದ ಕೆಲವು ದಿನಗಳ ನಂತರ ಈ ಫೋಸ್ಟರ್‌ನ್ನ ರಿಲೀಸ್‌ ಮಾಡಲಾಗಿದೆ. ಬೂದಿಬಳಿದ ಮುಖ, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಣಿ ಹಾರ, ತಲೆಯಲ್ಲಿ ಜಟೆ ಇರುವ ಪೋಸ್ಟರ್‌ ರಿಲೀಸ್‌ ಆಗಿ ವೈರಲ್‌ ಆಗ್ತಾ ಇದೆ.

ಈ ಫೋಟೋವನ್ನ ಅಕ್ಷಯ್‌ ಕುಮಾರ್‌ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿ ಕ್ಯಾಪ್ಶನ್‌ ಕೂಡ ಕೊಟ್ಟಿದ್ದಾರೆ. “ನಾವು ಬರ್ತಾ ಇದೀವಿ, ನೀವು ಕೂಡ ನಮ್ಮೊಂದಿಗೆ ಜಾಯ್ನ್‌ ಆಗಿ” ಅಂತ ಬರೆದಿದ್ದಾರೆ. ಇನ್ನೂ ಯಾಮಿ ಗೌತಮ್‌ ನಾಯಕಿಯಾಗಿರುವ ಈ ಚಿತ್ರ ಅಗಸ್ಟ್‌ 11ರಂದು ರಿಲೀಸ್‌ ಆಗಲಿದೆ.

-masthmagaa.com

Contact Us for Advertisement

Leave a Reply