ಲಸಿಕೆ ಇಲ್ಲದಿದ್ರೂ ಲಸಿಕೆ ಆಪ್‌ಗೆ ಹೊಸ ಫೀಚರ್!

masthmagaa.com:

ಭಾರತದಲ್ಲಿ ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕೋ ಅಭಿಯಾನ ಶುರುವಾಗಿದೆ. ಆದ್ರೆ ಲಸಿಕೆ ಕೇಂದ್ರದಲ್ಲಿ ಡೇಟಾ ಎಂಟ್ರಿ ಮಾಡಿಸುವಾಗ ಕೆಲವೊಂದು ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಕೋವಿನ್ ವೆಬ್​ಸೈಟ್​​​​ನಲ್ಲಿ ಹೊಸದೊಂದು ಫೀಚರ್ ಸೇರಿಸಲಾಗಿದೆ. ಅಂದ್ರೆ ಲಸಿಕೆ ಹಾಕಿಸಿಕೊಳ್ಳಲು ಅಪಾಯಿಂಟ್​​ಮೆಂಟ್ ತೆಗೆದುಕೊಳ್ಳುವವರಿಗೆ ನಾಳೆಯಿಂದ 4 ಡಿಜಿಟ್ ಸೆಕ್ಯೂರಿಟಿ ಕೋಡ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಒಂದು ಸ್ಲಿಪ್ ಕೂಡ ನೀಡಲಾಗುತ್ತೆ. ನೀವು ಅದರ ಪ್ರತಿಯನ್ನು ಮೊಬೈಲ್​ನಲ್ಲೇ ಸೇವ್ ಮಾಡಿಕೊಳ್ಳಬಹುದು..ನಂತರ ಈ ಕೋಡ್​​ನ್ನು ಪಡೆದುಕೊಂಡು ಲಸಿಕೆ ಕೇಂದ್ರಕ್ಕೆ ಹೋಗಿ ಅಲ್ಲಿ ಲಸಿಕೆ ಹಾಕುವವರ ಕೈಗೆ ಈ ಕೋಡ್ ಕೊಡಬೇಕು. ಇದ್ರಿಂದ ಲಸಿಕೆ ಹಾಕಿಸಿಕೊಳ್ಳುವವರ ಎಲ್ಲಾ ಮಾಹಿತಿ ದಾಖಲಾಗುತ್ತೆ. ಇದ್ರಿಂದ ಅಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಕುರಿತು ಮಾಹಿತಿ ದಾಖಲಿಸೋದು ಸುಲಭವಾಗುತ್ತೆ ಅಂತ ಸರ್ಕಾರ ಹೇಳಿದೆ.

ಲಸಿಕೆ ಕೇಂದ್ರಗಳಲ್ಲಿ ಲಸಿಕೆಯೇ ಇಲ್ಲದಿರುವಾಗ ಏನೇ ಫೀಚರ್ ತಂದ್ರೂ ಏನ್ ಪ್ರಯೋಜನ.. ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಸಿಕೆ ಕಂಪ್ಲೀಟಾಗಿ ಖಾಲಿಯಾಗಿದ್ದು, ನಾಳೆ ಬರ್ತಿದೆ. ನಾಡಿದ್ದು ಬರ್ತಿದೆ ಅಂತ ಹೇಳ್ತಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಮಾತ್ರ ರಾಜ್ಯಗಳ ಬಳಿ ಇನ್ನೂ 90 ಲಕ್ಷ ಡೋಸ್​​​ಗೂ ಹೆಚ್ಚು ಲಸಿಕೆ ಸ್ಟಾಕ್ ಇದೆ ಅಂತ ಹೇಳ್ತಾ ಇದೆ. ನಾವು ಈಗಾಗಲೇ 17.35 ಕೋಟಿ ಡೋಸ್ ಲಸಿಕೆ ಕೊಟ್ಟಿದ್ದೀವಿ. ಅದ್ರಲ್ಲಿ 16.44 ಕೋಟಿ ಡೋಸ್ ಲಸಿಕೆ ಬಳಸಲಾಗಿದೆ. ಇನ್ನು ಮುಂದಿನ 3 ದಿನಗಳಲ್ಲಿ 10 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತೆ ಅಂತ ಕೂಡ ಹೇಳ್ತಾ ಇದೆ. ಆದ್ರೆ ಆ ಸ್ಟಾಕ್ ಎಲ್ಲಿದೆ ಅಂತ ಗೊತ್ತಿಲ್ಲ.. ನಾವುನೂ ಮೇ 1ರಿಂದಲೇ ಸರ್ಚ್ ಮಾಡ್ತಾನೇ ಇದ್ದೀವಿ.. ಸ್ಲಾಟ್ ಸಿಗ್ತಾನೇ ಇಲ್ಲ.. ಈಗಂತೂ 45 ವರ್ಷ ಮೇಲ್ಪಟ್ಟವರಿಗೂ ಅಪಾಯಿಂಟ್​​ಮೆಂಟ್ ಸಿಗ್ತಾ ಇಲ್ಲ.. ಲಸಿಕೆ ಕೇಂದ್ರಗಳಲ್ಲಿ ಸ್ಟಾಕ್ ಇಲ್ಲ ಅಂತ ಹೇಳ್ತಿದ್ದಾರೆ.

ಇನ್ನೊಂದು ವಿಚಾರ ಅಂದ್ರೆ ದೇಶದಲ್ಲಿ ಮೇ 1ರಿಂದ ಈವರೆಗೆ 18ರಿಂದ 44 ವರ್ಷದೊಳಗಿನ 11.8 ಲಕ್ಷ ಮಂದಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಅದ್ರ ಪ್ರಕಾರ ಕರ್ನಾಟಕದಲ್ಲೂ 7,068 ಮಂದಿಗೆ ಹಾಕಲಾಗಿದೆ. ಆನ್​​ಲೈನ್​ನಲ್ಲಿ ಬುಕ್ ಮಾಡಕ್ಕೆ ಆಗ್ತಿಲ್ಲ.. ಯಾವುದರ ಆಧಾರದ ಮೇಲೆ ಹಾಕಿದ್ದಾರೆ ಅನ್ನೋ ಮಾಹಿತಿ ಇಲ್ಲ..

Contact Us for Advertisement

Leave a Reply