masthmagaa.com:

ಕೊರೋನಾ ಲಸಿಕೆಯನ್ನ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೂ ಕೊಡೋಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದುವರೆಗೆ ಆರೋಗ್ಯ ಕಾರ್ಯಕರ್ತರು, ಫಂಟ್​ಲೈನ್ ವರ್ಕರ್ಸ್, 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ  ಮಾತ್ರ ಕೊರೋನಾ ಲಸಿಕೆ ಹಾಕಲಾಗ್ತಿತ್ತು. ಆದ್ರೀಗ 45 ವರ್ಷ ಮೇಲ್ಪಟ್ಟರೆಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಅರ್ಹರು ಅಂತ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಇವತ್ತು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್​ ಮಾಹಿತಿ ನೀಡಿದ್ರು. ಅಲ್ಲದೆ 45 ವರ್ಷ ಮೇಲ್ಪಟ್ಟವರೆಲ್ಲರೂ ಈಗಲೇ ತಮ್ಮ ಹೆಸರನ್ನ ನೋಂದಾಯಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಿ ಅಂತ ಕರೆ ಕೊಟ್ಟಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಎದ್ದಿರೋ ಬೆನ್ನಲ್ಲೇ ಲಸಿಕೆಯನ್ನ ಎಲ್ಲಾ ಏಜ್​ ಗ್ರೂಪ್​ನವರಿಗೆ ಓಪನ್ ಅಪ್ ಮಾಡ್ಬೇಕು. ಎಷ್ಟುಸಾಧ್ಯವೋ ಅಷ್ಟುಬೇಗ ಹೆಚ್ಚೆಚ್ಚು ಜನರಿಗೆ ಲಸಿಕೆ ಹಾಕಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಕೊನೆಗೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. ನಮ್ಮ, ನಿಮ್ಮ ಮನೆಯಲ್ಲೂ 45 ವರ್ಷ ಮೇಲ್ಪಟ್ಟವರು ಇರಬಹುದು. ಅಥವಾ ಅಕ್ಕಪಕ್ಕದವರು, ಪರಿಚಯದವರು, ಫ್ರೆಂಡ್ಸ್ ಇರಬಹುದು. ಅವರೆಲ್ಲಾ ಲಸಿಕೆ ಹಾಕಿಸಿಕೊಳ್ಳೋದು ಹೇಗೆ ಅನ್ನೋದು ಸಾಕಷ್ಟು ಜನರಿಗೆ ಗೊತ್ತಿರಲ್ಲ. ಅದನ್ನ ಸಿಂಪಲ್ಲಾಗಿ ಹೇಳ್ತೀವಿ ನೋಡಿ.

– ನಿಮ್ಮ ಮೊಬೈಲ್​ನಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಓಪನ್ ಮಾಡಿ. ಈ ಅಪ್ಲಿಕೇಷನ್ ಇಲ್ಲ ಅಂದ್ರೆ ಡೌನ್​ಲೋಡ್ ಮಾಡಿಕೊಳ್ಳಿ.

– ಅಪ್ಲಿಕೇಷನ್​​ ಓಪನ್ ಮಾಡಿದ ತಕ್ಷಣ ಮೇಲ್ಗಡೆನೇ ನಿಮ್ಗೆ ವ್ಯಾಕ್ಸಿನೇಷನ್ ಅನ್ನೋದು ಕಾಣುತ್ತೆ. ಅದರ ಮೇಲೆ ಕ್ಲಿಕ್ ಮಾಡಿ.

– ನಿಮ್ಮ ಮೊಬೈಲ್​ ನಂಬರ್ ಟೈಪ್ ಮಾಡಿ, ಒಟಿಪಿ ಅನ್ನೋದ್ರ ಮೇಲೆ ಕ್ಲಿಕ್ ಮಾಡಿ. ನಂತ್ರ ನಿಮ್ಮ ಮೊಬೈಲ್​ಗೆ ಬರುವ ಒಟಿಪಿಯನ್ನ ಟೈಪ್ ಮಾಡಿ ವೆರಿಫೈ ಮಾಡಿಕೊಳ್ಳಿ.

– ಒಬ್ಬ ವ್ಯಕ್ತಿ ಮ್ಯಾಕ್ಸಿಮಮ್ ನಾಲ್ವರ ಹೆಸರನ್ನ ಲಸಿಕೆಗೆ ರಿಜಿಸ್ಟರ್ ಮಾಡ್ಬೋದು ಅಂತ ತೋರಿಸುತ್ತೆ. ನಂತರ ಲಸಿಕೆ ಹಾಕಿಸಿಕೊಳ್ಳೋರು ಆಸ್ಪತ್ರೆಗೆ ಬರುವಾಗ ತರುವ ದಾಖಲೆಯನ್ನ ಸೆಲೆಕ್ಟ್ ಮಾಡ್ಬೇಕು. ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಯಾವುದಾದ್ರೂ ಒಂದನ್ನ ಸೆಲೆಕ್ಟ್ ಮಾಡಿ.

– ನಂತರ ನೀವು ಸೆಲೆಕ್ಟ್ ಮಾಡಿದ ದಾಖಲೆಯ ನಂಬರ್ ಟೈಪ್ ಮಾಡ್ಬೇಕು. ಆಧಾರ್ ಕಾರ್ಡ್ ಅಂತಾದ್ರೆ ಆಧಾರ್ ನಂಬರ್. ನಂತ್ರ ಆಧಾರ್ ಕಾರ್ಡ್​​ನಲ್ಲಿ ನಿಮ್ಮ ಹೆಸರು ಹೇಗಿದೆಯೋ ಹಾಗೇ ಟೈಪ್ ಮಾಡಿ. ಆಮೇಲೆ ಪುರುಷನಾ, ಮಹಿಳೆನಾ ಅನ್ನೋದನ್ನ ಸೆಲೆಕ್ಟ್ ಮಾಡಿ. ಹುಟ್ಟಿದ ವರ್ಷವನ್ನ ಟೈಪ್ ಮಾಡಿ ಸಬ್​ಮಿಟ್​ ಕೊಟ್ರೆ ಆಯ್ತು.

– ಮುಂದಿನ ಹಂತದಲ್ಲಿ ಹೆಸರನ್ನ ಟಿಕ್ ಮಾರ್ಕ್ ಮಾಡಿ, ಶೆಡೂಲ್ ವ್ಯಾಕ್ಸಿನೇಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಿನ್​ ಕೋಡ್​ ಟೈಪ್ ಮಾಡಿ. ಜೊತೆ ಸರ್ಕಾರಿ ಆಸ್ಪತ್ರೆಯಲ್ಲಿ ಫ್ರೀ ಲಸಿಕೆ ಬೇಕಾ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ದುಡ್ ಕೊಟ್ಟು ತೆಗೆದುಕೊಳ್ಳುವ ಲಸಿಕೆ ಬೇಕಾ ಅಂತ ಸೆಲೆಕ್ಟ್ ಮಾಡಿ. ನಂತರ ‘ಫೈಂಡ್​ ವ್ಯಾಕ್ಸಿನೇಷನ್’ ಸೆಂಟರ್ ಮೇಲೆ ಕ್ಲಿಕ್ ಮಾಡಿ. ಒಂದಷ್ಟು ಲಿಸ್ಟ್ ಬರುತ್ತೆ. ಅದರಲ್ಲಿ ನೀವು ಎಲ್ಲಿ ಲಸಿಕೆ ಹಾಕೋಬೇಕು ಅಂದುಕೊಂಡಿದ್ದೀರೋ ಆ ವ್ಯಾಕ್ಸಿನೇಷನ್ ಸೆಂಟರ್ ಸೆಲೆಕ್ಟ್ ಮಾಡಿ. ನಂತರ ಯಾವ ದಿನಾಂಕದಂದು ಲಸಿಕೆ ಹಾಕಿಸಿಕೊಳ್ಳಬೇಕು ಅಂದುಕೊಂಡಿದ್ದೀರೋ ಅದನ್ನ ಟೈಪ್ ಮಾಡಿ. ನಂತರ ‘ಚೆಕ್ ಅವೈಲೇಬಿಲಿಟಿ’ ಮೇಲೆ ಕ್ಲಿಕ್ ಮಾಡಿ ಪ್ರೊಸೀಡ್​ ಕೊಟ್ರೆ ಆಯ್ತು. ಆ ದಿನ ಹೋಗಿ ಲಸಿಕೆ ಹಾಕ್ಕೊಂಡು ಬರಬಹುದು. ಸರ್ಕಾರಿ ಆಸ್ಪತ್ರೆಯಾದ್ರೆ ಏನೂ ದುಡ್ಡು ಕೊಡಬೇಕಂತಿಲ್ಲ. ಖಾಸಗಿ ಆಸ್ಪತ್ರೆಯಾದ್ರೆ 250 ರೂಪಾಯಿ ಕೊಡ್ಬೇಕು. ಹೆಸರನ್ನ ನೋಂದಾಯಿಸಿಕೊಳ್ಳೋ ಪ್ರೋಸೀಜರ್​ ಹೇಳೋಕೆ ಉದ್ದ ಅನ್ಸುತ್ತೆ. ಆದ್ರೆ ತುಂಬಾ ಈಸಿ ಇದೆ. ಆರೋಗ್ಯ ಸೇತು ಅಪ್ಲಿಕೇಷನ್​ಗೆ ಹೋದ್ರೆ ನಿಮ್ಗೇ ಗೊತ್ತಾಗುತ್ತೆ.

-masthmagaa.com

Contact Us for Advertisement

Leave a Reply