ಜಮ್ಮು ಕಾಶ್ಮೀರ ಕೇಸ್ ವಿಚಾರಣೆಗೆ ಟೈಂ ಇಲ್ಲ: ಸಿಜೆ ರಂಜನ್ ಗೊಗೊಯ್

ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಆಲಿಸಲು ಈಗ ಟೈಂ ಇಲ್ಲ. ಈಗ ನಾವು ಅಯೋಧ್ಯೆ ವಿಚಾರಣೆಯಲ್ಲಿ ಬ್ಯುಸಿ ಇದ್ದೇವೆ ಅಂತ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ. ಜಮ್ಮು ಕಾಶ್ಮೀರ ಸಂಬಂಧಿತ ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ವಿಚಾರಣೆ ಪ್ರತಿದಿನವೂ ನಡೆಯುತ್ತಿದೆ. ಹೀಗಾಗಿ ನಮಗೆ ಜಮ್ಮು ಕಾಶ್ಮೀರ ವಿಚಾರವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರ ಕುರಿತ ಅರ್ಜಿಗಳನ್ನು ನ್ಯಾ.ರಮಣ ನೇತೃತ್ವದ ಸಾಂವಿಧಾನಿಕ ಪೀಠ ನಾಳೆಯಿಂದ ವಿಚಾರಣೆ ನಡೆಸುತ್ತೆ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪತ್ರಕರ್ತರ ಮೇಲಿನ ನಿರ್ಬಂಧ ಹೇರಲಾಗಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ ಅಂತ ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಬಂಧಿತರಾಗಿರುವ ಜಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ರಾಜ್ಯಸಭೆ ಸದಸ್ಯ ವೈಕೋ ಅರ್ಜಿ ಸಲ್ಲಿಸಿದ್ದರು. ಅದ್ರೆ ಈ ಅರ್ಜಿಗಳ ವಿಚಾರಣೆ ನಡೆಸಲು ಇಂದು ಸುಪ್ರೀಂಕೋರ್ಟ್ ನಿರಾಕರಿಸಿದೆ.

Contact Us for Advertisement

Leave a Reply