ಮೀನಿನ ಹೊಟ್ಟೆ ಮೇಲೆ ಅಲ್ಲಾ…ದಂಡು ದಂಡಾಗಿ ಬಂದ ಜನ..!

ಉತ್ತರ ಪ್ರದೇಶದ ಶಾಮಿಲಿ ಜಿಲ್ಲೆಯ ಮನೆಯೊಂದರ ಅಕ್ವೇರಿಯಂನಲ್ಲಿ ವಿಚಿತ್ರ ಮೀನೊಂದು ಪತ್ತೆಯಾಗಿದೆ. ಅದರ ಮೈ ಮೇಲೆ ಅಲ್ಲಾ ಎಂಬ ಗುರುತು ಇದೆ. ಯುವಕನೊಬ್ಬ ಮನೆಯಲ್ಲಿ ತಂದಿಟ್ಟಿದ್ದ ಅಕ್ವೇರಿಯಂನಲ್ಲಿ ಈ ಮೀನು ಪತ್ತೆಯಾಗಿದೆ. ಶಾಮಿಲಿ ಜಿಲ್ಲೆಯ ಕೈರಾನಾದಲ್ಲಿರುವ ಆಲ್‍ಕಲಾದಲ್ಲಿ ಈ ಘಟನೆ ನಡೆದಿದೆ.

ಸಯೀದ್ ಅಹ್ಮದ್ ಪುತ್ರ ಶಬಾಬ್ ಅಹ್ಮದ್ ಮನೆಯಲ್ಲಿ ಒಂದು ಅಕ್ವೇರಿಯಂ ತಂದು ಇಟ್ಟಿದ್ದರು. ಒಂದು ಚಿಕ್ಕ ಮೀನಿನ ಜೊತೆ ಹಲವು ಮೀನುಗಳನ್ನು ತಂದು ಬಿಟ್ಟಿದ್ದರು. ಆ ಸಣ್ಣ ಮೀನು ದೊಡ್ಡದಾಗುತ್ತಾ ಬಂದಂತೆ ಅದರ ಹೊಟ್ಟೆ ಭಾಗದಲ್ಲಿ ಅಲ್ಲಾ ಎಂಬ ಗುರುತು ಇರೋದು ಬೆಳಕಿಗೆ ಬಂದಿದೆ. ಇದನ್ನು ಕಂಡು ಮನೆ ಮಂದಿಯೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ.

ಸುದ್ದಿ ಎಲ್ಲೆಡೆ ಹರಡುತ್ತಿದ್ದು ಎಲ್ಲರೂ ಈ ಮೀನು ನೋಡಲು ಶಬಾಬ್ ಮನೆಗೆ ಹೋಗ್ತಿದ್ದಾರೆ. ಈ ಮೀನಿಗೆ ರಶೀದ್ ಖಾನ್ ಎಂಬುವವರು 5 ಲಕ್ಷ ರೂಪಾಯಿವರೆಗೆ ನೀಡೋದಾಗಿ ಹೇಳಿದ್ದಾರೆ. ಆದ್ರೆ ಇನ್ನೂ ಹೆಚ್ಚಿನ ಬೇಡಿಕೆ ಬರಲಿ ಅಂತ ಶಬಾಬ್ ಕಾಯುತ್ತಿದ್ದಾರೆ.

Contact Us for Advertisement

Leave a Reply